ಪ್ರವಾಸಿ ಆಸ್ಟ್ರೇಲಿಯಾ ಎದುರು ಕಿವೀಸ್ ತಂಡಕ್ಕೆ 4 ರನ್ ರೋಚಕ ಜಯ

nz and aus for web
Published on

ಡುನೆಡಿನ್: ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ (97ರನ್, 50 ಎಸೆತ, 6 ಬೌಂಡರಿ, 8 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಮಿಚೆಲ್ ಸ್ಯಾಂಟ್ನರ್ (31ಕ್ಕೆ 4) ಮಾರಕ ದಾಳಿ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎದುರು 4 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಇದರೊಂದಿಗೆ 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ನ್ಯೂಜಿಲೆಂಡ್ 2-0 ಯಿಂದ ಮುನ್ನಡೆ ಸಾಧಿಸಿತು.

ಯುನಿವರ್ಸಿಟಿ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗೆ 219ರನ್ ಪೇರಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಮಾರ್ಕಸ್ ಸ್ಟೋಯಿನಿಸ್ (78ರನ್, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇನಿಯಲ್ ಸ್ಯಾಮ್ಸ್ (41ರನ್, 15 ಬೌಂಡರಿ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 8 ವಿಕೆಟ್‌ಗೆ 215 ರನ್ ಪೇರಿಸಲಷ್ಟೇ ಶಕ್ತವಾಯಿತು. 3ನೇ ಟಿ20 ಪಂದ್ಯ ಮಾರ್ಚ್ 3 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ನ್ಯೂಜಿಲೆಂಡ್: 7 ವಿಕೆಟ್‌ಗೆ 219 (ಮಾರ್ಟಿನ್ ಗುಪ್ಟಿಲ್ 97, ಕೇನ್ ವಿಲಿಯಮ್ಸನ್ 53, ಜೇಮ್ಸ್ ನೀಶಾಮ್ 45*, ಕೇನ್ ರಿಚರ್ಡ್‌ಸನ್ 43ಕ್ಕೆ 3), ಆಸ್ಟ್ರೇಲಿಯಾ: 8 ವಿಕೆಟ್‌ಗೆ 215 (ಮಾರ್ಕಸ್ ಸ್ಟೋಯಿನಿಸ್ 78, ಜೋಶ್ ಫಿಲಿಪ್ 45, ಡೇನಿಯಲ್ ಸ್ಯಾಮ್ಸ್ 41, ಮ್ಯಾಥ್ಯೂ ವೇಡ್ 24, ಮಿಚೆಲ್ ಸ್ಯಾಂಟ್ನರ್ 31ಕ್ಕೆ 4, ಜೇಮ್ಸ್ ನೀಶಾಮ್ 10ಕ್ಕೆ 2, ಟಿಮ್ ಸೌಥಿ 47ಕ್ಕೆ 1, ಇಶ್ ಸೋಧಿ 41ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net