

IPL | ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ಲಕ್ಷಾಂತರ ಜನ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದ ಒಳಗೆ ಬಂದು ಆಟ ವೀಕ್ಷಿಸುವುದು ಸಾಮಾನ್ಯ. ಇನ್ನೂ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ಶಕ್ತಿಯುತವಾದ ಹೊಡೆತಗಳನ್ನು ಹೊಡೆಯುತ್ತಾರೆ. ಹಲವು ಬಾರಿ ಚೆಂಡು ನೇರವಾಗಿ ಪ್ರೇಕ್ಷಕರ ಕುಳಿತಿರುವ ಗ್ಯಾಲರಿಗೆ ಬಂದು ಬೀಳುತ್ತವೆ. ಇಂತಹ ಸಮಯದಲ್ಲಿ ಚೆಂಡು ಪ್ರೇಕ್ಷಕನಿಗೆ ಬಿದ್ದು ಆತನ ದೇಹಕ್ಕೆ ಏನಾದರೂ ಪೆಟ್ಟಾದರೆ ಇದರ ಜವಾಬ್ದಾರಿಯನ್ನ ಯಾರು ತೆಗೆದುಕೊಳ್ಳುತ್ತಾರೆ ಎಂಬುದನ್ನ ತಿಳಿಯೋಣ.
ಭಾರತೀಯರಿಗೆ ಕ್ರಿಕೆಟ್ ಅಂದರೆ ತುಂಬಾ ಹುಚ್ಚು. ಬೀದಿಗಳಲ್ಲಿ ಕ್ರಿಕೆಟ್ ಆಡುವ ಮತ್ತು ಅದನ್ನು ಹುಚ್ಚರಂತೆ ಪ್ರೀತಿಸುವ ಅತೀ ಹೆಚ್ಚು ಜನರನ್ನು ನೀವು ನೋಡುತ್ತೀರಿ. ಇದಲ್ಲದೆ ಕ್ರೀಡಾಂಗಣದಲ್ಲಿ ಕುಳಿತು ಮೋಜು, ಮಸ್ತಿಯಿಂದ ಕ್ರಿಕೆಟ್ ನೋಡಲು ಬಯಸುತ್ತಾರೆ. ಇನ್ನುಳಿದ ಕೋಟ್ಯಾಂತರ ಜನರು ಈ ಪಂದ್ಯಗಳನ್ನು ಟಿವಿ ಮತ್ತು ಆನ್‌ಲೈನ್ ಮುಖಾಂತರ ವೀಕ್ಷಿಸುತ್ತಾರೆ. ಇನ್ನೂ ಐಪಿಎಲ್ ನಡೆಯುವ ಸಂದರ್ಭದಲ್ಲಿ ಪ್ರಪಂಚದ ಅತ್ಯುತ್ತಮ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಪಂದ್ಯಗಳು ತೀವ್ರ ಆಸಕ್ತಿ ಮತ್ತು ಮನರಂಜನೆಯಿಂದ ತುಂಬಿರುತ್ತವೆ. ಅದಕ್ಕಾಗಿಯೇ ಈ ಪಂದ್ಯಗಳನ್ನು ಕ್ರೀಡಾಂಗಣದಿಂದ ವೀಕ್ಷಿಸಲು ಹೆಚ್ಚು ಜನ ಸೇರುತ್ತಾರೆ. ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ಶಕ್ತಿಯುತವಾದ ಹೊಡೆತಗಳನ್ನು ಹೊಡೆದು ಎಷ್ಟೋ ಸಲ ಪ್ರೇಕ್ಷಕರಿಗೆ ಪೆಟ್ಟು ಬಿದ್ದಿರುವುದನ್ನು ನಾವು ಗಮನಿಸಿರುತ್ತೇವೆ.
ಐಪಿಎಲ್ ಪಂದ್ಯದ ಸಮಯದಲ್ಲಿ ಒಬ್ಬ ಪ್ರೇಕ್ಷಕನಿಗೆ ಚೆಂಡಿನಿಂದ ಗಾಯವಾದರೆ 'ಬಿಸಿಸಿಐ' ವೈದ್ಯಕೀಯ ಅಧಿಕಾರಿಗಳು ತಕ್ಷಣ ಅವರಿಗೆ ಸಹಾಯ ಮಾಡುತ್ತಾರೆ. ಪ್ರತಿಯೊಂದು ಕ್ರೀಡಾಂಗಣವು ಅಂತಹ ತುರ್ತು ಸಂದರ್ಭಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿ ವೈದ್ಯರು ಮತ್ತು ವೈದ್ಯಕೀಯ ತಂಡಗಳು ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ.
ಪ್ರಥಮ ಚಿಕಿತ್ಸಾ ಕೇಂದ್ರ: ಸಣ್ಣಪುಟ್ಟ ಗಾಯಗಳಿಗೆ ಕ್ರೀಡಾಂಗಣದಲ್ಲಿ ತಕ್ಷಣದ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷ ವೈದ್ಯಕೀಯ ಕೊಠಡಿ: ಗಾಯ ಗಂಭೀರವಾಗಿದ್ದರೆ, ಪ್ರೇಕ್ಷಕರನ್ನು ಕ್ರೀಡಾಂಗಣದಲ್ಲಿರುವ ವೈದ್ಯಕೀಯ ಕೊಠಡಿಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಆಂಬ್ಯುಲೆನ್ಸ್ ಸೇವೆ ಮತ್ತು ನಿರ್ವಹಣೆ : ಕ್ರೀಡಾಂಗಣದಲ್ಲಿ ಯಾವಾಗಲೂ ಆಂಬ್ಯುಲೆನ್ಸ್ ಇರುತ್ತದೆ, ಅಗತ್ಯವಿದ್ದರೆ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬಹುದು. ಹತ್ತಿರದ ಆಸ್ಪತ್ರೆಗಳನ್ನು ಮುಂಚಿತವಾಗಿ ಸಂಪರ್ಕಿಸಿ, ತುರ್ತು ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ನೀಡಲಾಗುತ್ತದೆ.
ತುರ್ತು ಸಂದರ್ಭಗಳಲ್ಲಿ ಪ್ರೇಕ್ಷಕರಿಗೆ ಸಹಾಯ ಮಾಡಲು ಭದ್ರತಾ ಸಿಬ್ಬಂದಿ ಮತ್ತು ಕ್ರೀಡಾಂಗಣದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ.
ಚೆಂಡು ಹೆಚ್ಚಾಗಿ ಬೀಳುವ ಸಾಧ್ಯತೆ ಇರುವ ಸ್ಥಳಗಳಲ್ಲಿ ವಿಶೇಷವಾಗಿ ಧ್ವನಿವರ್ಧಕಗಳು ಮತ್ತು ಎಚ್ಚರಿಕೆಗಳನ್ನು ನೀಡಲಾಗುತ್ತದೆ.
ಕ್ರೀಡಾಂಗಣದ ಸುತ್ತಲೂ ವಿಶೇಷ ರಕ್ಷಣಾತ್ಮಕ ಬಲೆಗಳನ್ನು ಅಳವಡಿಸಲಾಗಿರುತ್ತದೆ ಹಾಗಾಗಿ ಚೆಂಡು ನೇರವಾಗಿ ಪ್ರೇಕ್ಷಕರನ್ನು ತಲುಪುವುದನ್ನು ಇದು ತಡೆಯುತ್ತದೆ.
1) ಬೆಂಗಳೂರಿನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 2013 ರ ಐಪಿಎಲ್ ಆಡುವಾಗ, ಕ್ರಿಸ್ ಗೇಲ್ ಹೊಡೆದ ಶಕ್ತಿಶಾಲಿ ಹೊಡೆತದಿಂದ ಚೆಂಡು ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪುಟ್ಟ ಹುಡುಗಿಯ ಮೂಗಿಗೆ ಹೊಡೆದಿತ್ತು. ಕ್ರಿಸ್ ಗೇಲ್ ಹೊಡೆದ ಹೊಡೆತದಿಂದ ಹುಡುಗಿಯ ಮೂಗಿಗೆ ತೀವೃ ಪೆಟ್ಟಾಗಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಕ್ರಿಸ್ ಗೇಲ್ ಸ್ವತಃ ಅವರನ್ನು ಭೇಟಿಯಾಗಿದ್ದರು.
2) ಕೋಲ್ಕತ್ತಾದಲ್ಲಿ ಪಂಜಾಬ್ ವಿರುದ್ಧದ 2015 ರ ಐಪಿಎಲ್ ಪಂದ್ಯದಲ್ಲಿ, ಡೇವಿಡ್ ಮಿಲ್ಲರ್ ಹೊಡೆದ ಶಾಟ್ ಕ್ರೀಡಾಂಗಣದಲ್ಲಿದ್ದ ಪೊಲೀಸ್ ಅಧಿಕಾರಿಯ ಕಣ್ಣಿಗೆ ತಗುಲಿತ್ತು. ಅವರಿಗೆ ಗಂಭೀರ ಗಾಯಗಳಾಗಿ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡರು.