ಅಥಿಯಾ ಶೆಟ್ಟಿ & ಕೆ.ಎಲ್.ರಾಹುಲ್ ಮಗಳಿಗೆ ಮನೆಯಲ್ಲಿ ವಿಶೇಷ ಸ್ವಾಗತ | Athiya Shetty & KL Rahul

Untitled design (92)
Published on

ಮುಂಬೈ: ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್(Athiya Shetty & KL Rahul) ದಂಪತಿಗೆ 24.03.2025ರಂದು ಮಗಳು ಜನಿಸಿದ್ದು ಗೊತ್ತೆ ಇದೆ. ಅವರಿಬ್ಬರೂ ಪಾಲಕರಾಗಿ ಈ ಹಂತವನ್ನು ಮುಕ್ತವಾಗಿ ಆನಂದಿಸುತ್ತಿದ್ದಾರೆ. ನಟಿ ಆಸ್ಪತ್ರೆಯಿಂದ ಮನೆಗೆ ಬಂದಂತೆ ಕಾಣುತ್ತಿದೆ. ಏಕೆಂದರೆ ಅವರು ತಮ್ಮ ಮಗುವಿನ ಸ್ವಾಗತದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಥಿಯಾ ಹಂಚಿಕೊಂಡಿರುವ ಪೋಸ್ಟ್​​ನಲ್ಲಿ ಹೂವುಗಳು ಮತ್ತು ಕುಂಕುಮದಿಂದ ತುಂಬಿದ ಎರಡು ತಟ್ಟೆಗಳನ್ನು ತೋರಿಸುವ ಫೋಟೋವನ್ನು ಕಾಣಬಹುದು. ಆ ಫೋಟೋ ಮೇಲೆ 'ಓಂ' ಎಂದು ಬರೆಯಲಾಗಿದೆ.

ದಂಪತಿ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸಂತೋಷದ ಸುದ್ದಿಯನ್ನು ಘೋಷಿಸಿದರು. ಅವರು ಎರಡು ಹಂಸಗಳ ವರ್ಣಚಿತ್ರದ ಜತೆಗೆ 'ಹೆಣ್ಣು ಮಗುವಿನೊಂದಿಗೆ ಧನ್ಯರು' ಎಂಬ ಸಂದೇಶವನ್ನು ಹಂಚಿಕೊಂಡರು.

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮೊದಲ ಬಾರಿಗೆ 2019ರಲ್ಲಿ ಸಾಮಾನ್ಯ ಸ್ನೇಹಿತರ ಮೂಲಕ ಪರಸ್ಪರ ಭೇಟಿಯಾದರು. ಅವರು ಜನವರಿ 2023ರಲ್ಲಿ ವಿವಾಹವಾದರು. ಅವರ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಸುನೀಲ್ ಶೆಟ್ಟಿ ಅವರ ಖಂಡಾಲಾ ತೋಟದ ಮನೆಯಲ್ಲಿ ಮದುವೆ ನಡೆಯಿತು. ಈ ವರ್ಷದ ಜನವರಿಯಲ್ಲಿ ಈ ದಂಪತಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net