ಫೈನಲ್‌ನಲ್ಲಿ ಹರ್ಮಾನ್ ಪ್ರೀತ್ ಪಡೆಗೆ ನಿರಾಸೆ: ಭಾರತ ರನ್ನರ್ ಅಪ್

New-Project-1-12
Published on

ಡಂಬುಲಾ: ಆತಿಥೇಯ ಶ್ರೀಲಂಕಾ ತಂಡ ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಾಯಕಿ ಚಾಮರಿ ಅಟಪಟ್ಟು (61 ರನ್, 43 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಹರ್ಷಿತಾ ಸಮರವಿಕ್ರಮ (69* ರನ್, 51 ಎಸೆತ, 6 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಎದುರು ಮಂಕಾದ ಭಾರತ ತಂಡ 8 ವಿಕೆಟ್‌ಗಳಿಂದ ಶ್ರೀಲಂಕಾ ಎದುರು ಪರಾಭವಗೊಂಡಿತು. ಇದರೊಂದಿಗೆ ಸತತ 2ನೇ ಒಟ್ಟಾರೆ 8ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಸಿಯಾಯಿತು.

ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್‌ಗೆ ಇಳಿಯಿತು. ಉಪನಾಯಕಿ ಸ್ಮತಿ ಮಂದನಾ ( 60 ರನ್, 47 ಎಸೆತ, 10 ಬೌಂಡರಿ) ಅರ್ಧಶತಕ ಹಾಗೂ ರಿಚಾ ೋಷ್ (30 ರನ್, 14 ಎಸೆತ, 4 ಬೌಂಡರಿ, 1 ಸಿಕ್ಸರ್)ಉಪಯುಕ್ತ ಕೊಡುಗೆಯಿಂದ 6 ವಿಕೆಟ್‌ಗೆ 165 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಆರಂಭಿಕ ವಿಶ್ಮಿ ಗುಣರತ್ನೆ (1) ವಿಕೆಟ್ ಬೇಗನೆ ಕಳೆದುಕೊಂಡ ಲಂಕಾ ಚೇಸಿಂಗ್‌ಗೆ ಚಾಮರಿ-ಹರ್ಷಿತಾ ಬಲ ತುಂಬಿದರು. ಅಂತಿಮವಾಗಿ 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 167 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು. 5 ರನ್ ಅವಶ್ಯವಿದ್ದಾಗ ಕವಿಷಾ ದಿಲ್ಲಾರಿ (30*) ಸಿಕ್ಸರ್‌ನೊಂದಿಗೆ ಲಂಕಾ ಗೆಲುವು ಸಾರಿದರು.

ಭಾರತ: 6 ವಿಕೆಟ್‌ಗೆ 165 (ಶೆಾಲಿ 16, ಸ್ಮತಿ 60, ಉಮಾ 9, ಹರ್ಮಾನ್‌ಪ್ರೀತ್ 11, ಜೆಮೀಮಾ 29, ರಿಚಾ 30, ಪೂಜಾ 5*, ಕವಿಷಾ 36ಕ್ಕೆ 2).

ಶ್ರೀಲಂಕಾ: 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 167 (ವಿಶ್ಮಿ 1, ಚಾಮರಿ 61,ಹರ್ಷಿತಾ 39*,ಕವಿಷಾ 30*, ದೀಪ್ತಿ 30ಕ್ಕೆ 1).

ಪಂದ್ಯಶ್ರೇಷ್ಠ: ಹರ್ಷಿತಾ ಸಮರವಿಕ್ರಮ, ಸರಣಿಶ್ರೇಷ್ಠ: ಚಾಮರಿ ಅಟಪಟ್ಟು.

2. ಸತತ 9ನೇ ಬಾರಿ ಫೈನಲ್ ಆಡಿದ ಭಾರತ ತಂಡಕ್ಕೆ ಇದು 2ನೇ ಸೋಲಾಗಿದೆ. 2018ರಲ್ಲಿ ಬಾಂಗ್ಲಾದೇಶ ಎದುರು ಮೊದಲ ಬಾರಿ ಮುಗ್ಗರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net