ಜಿತೇಂದರ್​ಗೆ ಬೆಳ್ಳಿ ಪದಕ: ಏಷ್ಯನ್ ಕುಸ್ತಿ, ದೀಪಕ್, ರಾಹುಲ್​ಗೆ ಕಂಚು

Jitendra
Published on

ನವದೆಹಲಿ: ಭಾರತ ತಂಡ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಅಂತಿಮ ದಿನ ಸ್ವರ್ಣ ಪದಕ ಗೆಲ್ಲುವಲ್ಲಿ ವಿಫಲವಾಯಿತು. 74 ಕೆಜಿ ವಿಭಾಗದಲ್ಲಿ ಫೈನಲ್​ಗೇರಿದ್ದ ಜಿತೇಂದರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ವಪಕದ ವಿಜೇತ ದೀಪಕ್ ಪೂನಿಯಾ ಹಾಗೂ ರಾಹುಲ್ ಅವಾರೆ ಕಂಚಿನ ಪದಕ ಜಯಿಸಿದರು. ಇದರಿಂದಾಗಿ ಭಾರತ ಕೂಟದಲ್ಲಿ 5 ಚಿನ್ನ, 6 ಬೆಳ್ಳಿ, 8 ಕಂಚಿನೊಂದಿಗೆ 19 ಪದಕ ಜಯಿಸಿ ಮೂರನೇ ಸ್ಥಾನಿಯಾಗಿ ಕೂಟ ಮುಗಿಸಿತು.

ಭಾನುವಾರ ನಡೆದ ಪುರುಷರ ಫ್ರೀಸ್ಟೈಲ್​ನ 74 ಕೆಜಿ ವಿಭಾಗದ ಫೈನಲ್​ನಲ್ಲಿ ಜಿತೇಂದರ್ 2-3 ರಿಂ ಕಜಾಕಿಸ್ತಾನದ ಡಾನಿಯರ್ ಕೈಸಾನೋವ್​ಗೆ ಶರಣಾದರು. ಅದರೊಂದಿಗೆ ರ್ಕಿಗಿಸ್ತಾನದಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯಶ ಕಂಡರು.

ಇನ್ನೊಂದೆಡೆ ಸ್ವರ್ಣ ಗೆಲ್ಲುವ ಫೇವರಿಟ್

ಗಳಾಗಿದ್ದ ರಾಹುಲ್ ಅವಾರೆ ಹಾಗೂ ದೀಪಕ್ ಪೂನಿಯಾ ಸೆಮಿಫೈನಲ್ ಹಂತದಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದರು. 86 ಕೆಜಿ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ದೀಪಕ್ ಪೂನಿಯಾ 10-0ಯಿಂದ ಇರಾಕ್​ನ ಅಲ್ ಒಬೈದಿಯನ್ನು ಮಣಿಸಿದರೆ, 61 ಕೆಜಿ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ರಾಹುಲ್ ಅವಾರೆ 5-2 ರಿಂದ ಇರಾನ್​ನ ಮಜೀದ್ ಅಲ್ಮಾಸ್​ರನ್ನು ಸೋಲಿಸಿದರು. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net