ಭಾರತಕ್ಕೆ ಮೂರು ಚಿನ್ನದ ಪದಕ, ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್ | ಪಿಂಕಿಗೆ ಮೊದಲ ಸ್ವರ್ಣ

SARITA AND PINKY 20 FEB 20
Published on

ನವದೆಹಲಿ: ಭಾರತದ ಕುಸ್ತಿಪಟುಗಳಾದ ಸರಿತಾ ಮೊರ್, ದಿವ್ಯಾ ಕ್ಯಾಕ್ರನ್ ಹಾಗೂ ಪಿಂಕಿ ಏಷ್ಯಾ ಕುಸ್ತಿ ಚಾಂಪಿಯನ್​ಷಿಪ್​ನ ಮಹಿಳೆಯರ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ಕೂಟದ ಮೂರನೇ ದಿನವಾದ ಗುರುವಾರ ನಡೆದ ಚಾಂಪಿಯನ್​ಷಿಪ್​ನ 59 ಕೆಜಿ ವಿಭಾಗದಲ್ಲಿ ಸರಿತಾ 3-2 ರಿಂದ ಮಂಗೋಲಿಯಾದ ಬ್ಯಾಟ್​ಸೆಟ್​ಸೆಗ್ ಅಟ್ಲಾಂಟಸೆಟ್​ಸೆಗ್ ಎದುರು ಜಯ ದಾಖಲಿಸಿದರು.

2017ರ ಬಳಿಕ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಸರಿತಾ ಭಾಗವಹಿಸಿದ್ದರು. 55ಕೆಜಿ ವಿಭಾಗದಲ್ಲಿ ಭಾರತದ ಪಿಂಕಿ 2-1 ರಿಂದ ಮಂಗೊಲಿಯಾದ ಹಾಲಿ ಚಾಂಪಿಯನ್ ಡುಲ್ಗುನ್ ಬೊರ್ಲೆಮಾ ಅವರನ್ನು ಮಣಿಸಿ ಸ್ವರ್ಣ ಗೆದ್ದರು. ಇದರೊಂದಿಗೆ ಪಿಂಕಿ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದರು. 68 ಕೆಜಿ ವಿಭಾಗದಲ್ಲಿ ದಿವ್ಯಾ ಕ್ಯಾಕ್ರನ್ ಮೂರನೇ ದಿನ ಮೊದಲ ಸ್ವರ್ಣ ಗೆದ್ದುಕೊಟ್ಟರು. ಒಂದೇ ದಿನ ಭಾರತಕ್ಕೆ ಮೂರು ಸ್ವರ್ಣ ಪದಕಗಳು ಒಲಿದಿದ್ದು ವಿಶೇಷ. ನವಜೋತ್ ಕೌರ್, 2018ರಲ್ಲಿ ಸ್ವರ್ಣ ಜಯಿಸುವ ಮೂಲಕ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು. 50ಕೆಜಿ ವಿಭಾಗದಲ್ಲಿ ಭಾರತದ ನಿರ್ಮಲಾ ದೇವಿ 2-3 ರಿಂದ ಜಪಾನ್​ನ ಮಿಹೊ ಇಗಾರಾಶಿ ಎದುರು ಸೋಲನುಭವಿಸಿದರು. ಭರ್ಜರಿ ನಿರ್ವಹಣೆ ತೋರಿದರೂ ಸ್ವರ್ಣ ಒಲಿಸಿಕೊಳ್ಳಲು ನಿರ್ಮಲಾ ವಿಫಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net