16 ವರ್ಷಗಳ ಬಳಿಕ ರಿಕರ್ವ್ ಬಿಲ್ಲುಗಾರಿಕೆಯಲ್ಲಿ ಪದಕದ ಬೇಟೆ: ಕಂಚಿಗೆ ಸಂತೃಪ್ತಿ ಪಟ್ಟ ನೀರಜ್ ಚೌಹಾಣ್‌! Neeraj Chauhan

16 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ರಿಕರ್ವ್ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ನೀರಜ್ ಚೌಹಾಣ್! ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೌಹಾಣ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Neeraj Chauhan recurve archery bronze medal
ನೀರಜ್ ಚೌಹಾಣ್ ರಿಕರ್ವ್ ಬಿಲ್ಲುಗಾರಿಕೆ ಕಂಚಿನ ಪದಕ
Published on: 

ಜಪಾನ್​: ಜಪಾನ್​ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರಿದಿದೆ.

ಶನಿವಾರ (ಅ.3) ನಡೆದ ಪುರುಷರ ರಿಕರ್ವ್​ ಬಿಲ್ಲುಗಾರಿಕೆಯಲ್ಲಿ ನೀರಜ್​ ಚೌಹಾಣ್​ ಕಂಚಿನ ಪದಕ ಗೆಲ್ಲುವ ಮೂಲಕ 16 ವರ್ಷಗಳ ಬಳಿಕ ಈ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2010 ರಲ್ಲಿ ತರುಣ್​ದೀಪ್​ ರೈ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದರೆ, ಈಗ ಭರ್ತಿ 16 ವರ್ಷಗಳ ನಂತರ ನೀರಜ್​ ಚೌಹಾಣ್​ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

6-4 ರ ಅಂತರದಲ್ಲಿ ಕಂಚು ಗೆದ್ದ ಚೌಹಾಣ್​!

ತನ್ನ ವಿರೋಧಿ ಧೀರಜ್ ಬೊಮ್ಮದೇವರ ಅವರನ್ನು ಸೋಲಿಸಿ ನೀರಜ್​ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತ ಏಷ್ಯನ್​ ಕ್ರೀಡಾಕೂಟದಲ್ಲಿ ಬಿಲ್ಲುಗಾರಿಕೆಯಲ್ಲಿ 9 ನೇ ಪದಕವನ್ನು ಪಡೆಯುವಂತೆ ಮಾಡಿದ್ದಾರೆ.

ಮೊದಲ ಸೆಟ್‌ನಲ್ಲಿ ಧೀರಜ್ ಬೊಮ್ಮದೇವರ 7 ಅಂಕ ಪಡೆದರೆ, ನೀರಜ್​ 10 ಅಂಕವನ್ನು ಪಡೆದುಕೊಂಡರು. ಆದರೆ ನಂತರದ ಎರಡು ಸೆಟ್​ಗಳಲ್ಲಿ ವಿಜಯವಾಡ ಮೂಲದ ಧೀರಜ್ ಬೊಮ್ಮದೇವರ ಕ್ರಮವಾಗಿ 28-27 ಮತ್ತು 29-28 ಅಂಕಗಳಿಂದ ಗೆದ್ದು, ಆಟದಲ್ಲಿ 4-2 ರ ಮುನ್ನಡೆ ಸಾಧಿಸಿದರು. ನಂತರ ಕೊನೆಯ 4ನೇ ಸೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನೀರಜ್​ 30-28 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು.

2-4 ರ ಹಿನ್ನಡೆಯನ್ನು ಮೆಟ್ಟಿನಿಂತು, ಧೀರಜ್​ ಬೊಮ್ಮದೇವರ ಅವರನ್ನು 6-4 ರ ಅಂತರದಲ್ಲಿ ಸೋಲಿಸಿ, ನೀರಜ್​ ಕಂಚಿನ ಪದಕವನ್ನು ಪಡೆದಿರುವುದು ಆಶ್ಚರ್ಯ ಹಾಗೂ ಅಭಿನಂದನಾರ್ಹ ಸಂಗತಿಯಾಗಿ ಮೂಡಿ ಬಂದಿದೆ.

Also Read
ಚೀನಾದ ಬಾಕ್ಸರ್‌ಗೆ "ಲವ್ಲಿ" ಪಂಚ್‌! ಹುಟ್ಟುಹಬ್ಬದಂದೇ ಚಿನ್ನದ ಪದಕ; ನೂತನ ದಾಖಲೆ ನಿರ್ಮಿಸಿದ ಭಾರತದ ಹೆಮ್ಮೆಯ ಪುತ್ರಿ! Lovlina Borgohain
Neeraj Chauhan recurve archery bronze medal

ಬಿಲ್ಲುಗಾರಿಕೆಯಲ್ಲಿ 9 ನೇ ಪದಕ!

ನೀರಜ್​ ಚೌಹಾಣ್​ ಪುರುಷರ ವೈಯಕ್ತಿಕ ರಿಕರ್ವ ವಿಭಾಗದಲ್ಲಿ, ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತ ಏಷ್ಯಾ ಕ್ರೀಡಾಕೂಟದಲ್ಲಿ ಬಿಲ್ಲುಗಾರಿಕೆಯಲ್ಲಿ 9 ನೇ ಪದಕವನ್ನು ಪಡೆಯುವಂತೆ ಮಾಡಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ (ಅ.2) ನಡೆದಿದ್ದ ಬಿಲ್ಲುಗಾರಿಕೆಯಲ್ಲಿ ಮಹಿಳಾ ರಿಕರ್ವ್ ತಂಡ ಬಂಗಾರ, ಮಹಿಳೆಯರ ವೈಯಕ್ತಿಕ ರಿಕರ್ವ್​ನಲ್ಲಿ ಕುಂಕುಮ್ ಅನಿಲ್ ಮೋಹೋದ್ ಬಂಗಾರ, ಮಹಿಳಾ ಕಾಂಪೌಂಡ್ ತಂಡ ಬಂಗಾರ, ಪುರುಷರ ಕಾಂಪೌಂಡ್ ತಂಡ ಬಂಗಾರ, ಕಾಂಪೌಂಡ್ ಮಿಶ್ರ ತಂಡ ಬಂಗಾರ, ಪುರುಷರ ರಿಕರ್ವ್ ತಂಡ ಬೆಳ್ಳಿ, ರಿಕರ್ವ್ ಮಿಶ್ರ ತಂಡ ಬೆಳ್ಳಿ ಹಾಗೂ ಪುರುಷರ ವೈಯಕ್ತಿಕ ಕಾಂಪೌಂಡ್​ನಲ್ಲಿ ಗಣೇಶ್ ಮಣಿರತ್ನಂ ತಿರುಮುರು ಕಂಚನ್ನು ಗೆದ್ದಿದ್ದರು. ಈ ಮೂಲಕ ಏಷ್ಯನ್​ ಕ್ರೀಡಾಕೂಟದಲ್ಲಿ ಭಾರತದ ಬಿಲ್ಲುಗಾರರು ಬಿಲ್ಲುಗಾರಿಕೆಯ ವಿವಿಧ ವಿಭಾಗದಲ್ಲಿ 5 ಬಂಗಾರ, 2 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net