ಇಂದು ಒಂದೇ ದಿನ 5 ಸ್ವರ್ಣ! ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಎಷ್ಟಾಗಿದೆ? ಇಲ್ಲಿದೆ ವಿವರ | Asian Games

ವಿಶೇಷ ಎಂದರೆ, ಇದೇ ದಿನ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿಯೂ ಭಾರತಕ್ಕೆ ಸ್ವರ್ಣ ಒಲಿದಿದೆ. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಲೊವ್ಲಿನಾ ಮತ್ತು 65 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಚಿನ್ನದ ಪದಕ ಗೆದ್ದರು
Asian Games
ಇಂದು ಒಂದೇ ದಿನ 5 ಸ್ವರ್ಣ! ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಎಷ್ಟಾಗಿದೆ? ಇಲ್ಲಿದೆ ವಿವರ | Asian Games
Published on: 

Asian Games: ಪ್ರಸಕ್ತ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಪುರುಷರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟ ಅಂಕುಶ್ ಪಂಗಲ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹರಿಯಾಣದ 21ರ ಹರೆಯದ ಬಾಕ್ಸರ್ ಅಂಕುಶ್, ಪುರುಷರ 80 ಕೆಜಿ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಮಿನ್‌ಸಿಯಾಂಗ್ ಕಿಮ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಈ ಏಷ್ಯನ್ ಗೇಮ್ಸ್‌ಗೂ ಮುನ್ನ ಅಂಕುಶ್ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದು, ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ಅಂಕುಶ್ ಚಿನ್ನದ ಪದಕ ಪಡೆಯುವ ಮೊದಲು, ಭಾರತ ಕೇವಲ ಎರಡು ಕಂಚಿನ ಪದಕಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ವಿಶೇಷ ಎಂದರೆ, ಇದೇ ದಿನ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿಯೂ ಭಾರತಕ್ಕೆ ಸ್ವರ್ಣ ಒಲಿದಿದೆ. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಲೊವ್ಲಿನಾ ಮತ್ತು 65 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಚಿನ್ನದ ಪದಕ ಗೆದ್ದರು.

ಅಲ್ಲಿಗೆ, ಇಂದು ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ, ಬಾಕ್ಸರ್ ಅಂಕುಶ್ ಪಂಗಲ್ ಮತ್ತು ಕುಸ್ತಿಪಟು ಸುಜೀತ್ ಕಲ್ಕಲ್ ತಮ್ಮ ವಿಭಾಗಗಳ ಫೈನಲ್ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಭಾರತಕ್ಕೆ ಎರಡು ಚಿನ್ನದ ಪದಕಗಳನ್ನು ತಂದುಕೊಟ್ಟರೆ, ಮಹಿಳೆಯರ ಆರ್ಚರಿ ಟೀಮ್​, ಬಾಕ್ಸರ್​ಗಳಾದ ಲವ್ಲಿನಾ ಬೊರ್ಗೊಹೈನ್ ಮತ್ತು ಪರ್ವೀನ್ ಹೂಡಾ ಕೂಡ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲಿಗೆ, ಇಂದು ಒಂದೇ ದಿನ ಭಾರತಕ್ಕೆ ಒಂದಲ್ಲ, ಎರಡಲ್ಲ ಒಟ್ಟು ಐದು ಸ್ವರ್ಣ ಸಿಕ್ಕಿದೆ.

Also Read
ಜರ್ಮನ್​ರಿಗೆ ಕಾಡುತ್ತಿರುವ ಅತಿದೊಡ್ಡ ಭಯ ಅಂದ್ರೆ ಇದೇ ಅಂತೆ! ಸಮೀಕ್ಷೆಯಲ್ಲಿ ಸಿಕ್ಕ ಉತ್ತರದ ಹಿಂದಿದೆ ವಾಸ್ತವ | Germans Fears
Asian Games

ಈ ವರ್ಷದ ಏಷ್ಯನ್ ಕ್ರೀಡಾಕೂಟದಲ್ಲಿ ಇದುವರೆಗೆ ಭಾರತ ಒಟ್ಟು 75 ಪದಕಗಳನ್ನು ಬಾಚಿಕೊಂಡಿದ್ದು, ಇದರಲ್ಲಿ 15 ಚಿನ್ನ, 25 ಬೆಳ್ಳಿ ಮತ್ತು 35 ಕಂಚು ಸೇರಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳು ಬರುವ ನಿರೀಕ್ಷೆಯಿದ್ದು, ಅಕ್ಟೋಬರ್​ 03ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್​ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net