ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ

New-Project-2-1
Published on

ಬೆಂಗಳೂರು: ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗಳಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದ್ದೇನೆ ಎಂದು ಭಾರತದ ಭರವಸೆಯ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಡ್ಯುರೊಪ್ಲೆಕ್ಸ್ ಮತ್ತು ಇನ್ಸ್ಪೈರ್ ಇನ್ ಸ್ಟಿಟ್ಯೂಟ್ ಆಫ್ ಸ್ಪೋಟ್ಸ್‌ನೊಂದಿಗಿನ ಪಾಲುದಾರಿಕೆ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುನ ನಿರೀಕ್ಷೆಯಲ್ಲಿದ್ದು, ತವರು ರಾಜ್ಯದಲ್ಲಿ ಕಠಿಣ ಅಭ್ಯಾಸ ನಡೆಸಲಾಗುತ್ತಿದೆ. ಆದ್ದರಿಂದ ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್‌ನಿಂದ ಹೊರಗುಳಿಯಲೂ ನಿರ್ಧರಿಸಿದ್ದೇನೆ ಎಂದರು.

ಇತ್ತೀಚೆಗೆ ಪ್ಯಾರೀಸ್ ಡೈಮಂಡ್ ಲೀಗ್‌ನಲ್ಲಿ ಮೂರನೇ ಸ್ಥಾನ, ಜ್ಯೂರಿಚ್‌ನಲ್ಲಿ ನಡೆದ ಕೂಟದಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಶ್ರೀಕರ್ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಗೋಂಡಿದ್ದರು. ಸೆ.21 ರಂದು ಭಾರತದಿಂದ ಏಷ್ಯಾಡ್ ಟೂರ್ನಿಯಲ್ಲಿ ಫಾಲ್ಗೊಳ್ಳಲು ಪ್ರಯಾಣ ಬೆಳೆಸಲಿದ್ದು, ಅಮೆರಿಕ ಹಾಗೂ ಭಾರತ ನಡುವೆ ಪ್ರಯಾಣ ಸಮಯಕ್ಕೆ 24 ಗಂಟೆ ಮೀಸಲಿರಿಸ ಬೇಕು ಬಳಿಕ ಚೀನಾ ಪ್ರಯಾಣಕ್ಕೆ 14 ತಾಸು ಅವಶ್ಯವಿದ್ದು, ಸತತ ಪ್ರಯಾಣದಿಂದ ದೇಹ ಬಳಲುತ್ತದೆ. ಆದ್ದರಿಂದ ಡೈಮಂಡ್ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಲಾಗಿದೆ ಎಂದು ಶ್ರೀಕರ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಾದ - ಕಲೈವಾಣಿ ಶ್ರೀನಿವಾಸನ್ (ಬಾಕ್ಸಿಂಗ್), ಶ್ರೀಶಂಕರ್ ಮುರಳಿ (ಲಾಂಗ್ ಜಂಪ್), ಪ್ರಿಯಾ ಎಚ್ ಮೋಹನ್ (ರಿಲೇ) ಐದು ಒಲಂಪಿಕ್ ವಿಭಾಗಗಳಲ್ಲಿ ಯುವ ಕ್ರೀಡಾಪಟುಗಳನ್ನು ಪೋಷಿಸುವ ಉನ್ನತ-ಕಾರ್ಯಕ್ಷಮತೆಯ ತರಬೇತಿ ಕೇಂದ್ರವಾದ ಇನ್ಸ್ಪೈರ್ ಇನ್ ಸ್ಟಿಟ್ಯೂಟ್ ಆಫ್ ಸ್ಪೋಟ್ಸ್ ನೊಂದಿಗೆ ಸಹಯೋಗವು ಭಾರತೀಯ ಕ್ರೀಡಾಪಟುಗಳು ಯಶಸ್ಸಿಗೆ ತಯಾರಾಗುವ ವಿಧಾನವನ್ನು ಮರು ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಭಾರತದ ಪ್ರತಿಭಾನ್ವಿತ ಅಥ್ಲೀಟ್ ಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸುತ್ತಿರುವಾಗ ಅವರಿಗೆ ಬೆಂಬಲವಾಗಿ ಸ್ಪೂರ್ತಿದಾಯಕ ಪ್ರಯಾಣವನ್ನು ಆರಂಭಿಸುತ್ತದೆ ಡ್ಯುರೊಪ್ಲೆಕ್ಸ್‌ನ ಸಿಇಒ ಜೆ. ಮೋಹನರಾಜ್ ತಿಳಿಸಿದರು.ಬಾಕ್ಸರ್ ಕಲೈವಾಣಿ ಶ್ರೀನಿವಾಸನ್, ಅಥ್ಲೀಟ್ ಪ್ರಿಯಾ ಎಚ್ ಮೋಹನ್, ಡ್ಯುರೊಪ್ಲೆಕ್ಸ್‌ನ ಸಿಇಒ ಜೆ. ಮೋಹನರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net