

ಕೌಲಾಲಂಪುರ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಕರ್ನಾಟಕ ಮೂಲದ ಚಿರಾಗ್ ಶೆಟ್ಟಿ ಜೋಡಿ ವರ್ಷದ ಮೊದಲ ಸವಾಲೆನಿಸಿರುವ ಮಲೇಷ್ಯಾ ಓಪನ್ ಸೂಪರ್&1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ೈನಲ್ಗೇರಿದೆ.
ಶನಿವಾರ ನಡೆದ ಪುರುಷರ ಡಬಲ್ಸ್ ಸೆಮಿೈನಲ್ನಲ್ಲಿ ವಿಶ್ವ ನಂ.2 ಸಾತ್ವಿಕ್&ಚಿರಾಗ್ ಜೋಡಿ 21-18, 22-20 ನೇರ ಗೇಮ್ಗಳಿಂದ ವಿಶ್ವ ಚಾಂಪಿಯನ್ ಕೊರಿಯಾದ ಸೆಯೂ ಸೆಯುಂಗ್ ಜೇ& ಕಂಗ್ಮಿನ್ ಹ್ಯುಕ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿತು. 2ನೇ ಗೇಮ್ನಲ್ಲಿ ಕೆಲವು 14-20ರಿಂದ ಹಿನ್ನಡೆಯಲ್ಲಿದ್ದ ಭಾರತೀಯ ಜೋಡಿ ಆರು ಗೇಮ್ ಪಾಯಿಂಟ್ ಮೆಟ್ಟಿನಿಂತು ಸತತವಾಗಿ ಎಂಟು ಅಂಕ ಕಲೆಹಾಕುವ ಮೂಲಕ ವಿಶ್ವ ಚಾಂಪಿಯನ್ನರಿಗೆ ಆಘಾತ ನೀಡಿದರು.
ಒಟ್ಟಾರೆ ಮೂರನೇ ಬಾರಿಗೆ ಕೊರಿಯನ್ ಜೋಡಿಯನ್ನು ಮಣಿಸಿದ ಸಾತ್ವಿಕ್&ಚಿರಾಗ್ ಜೋಡಿ ಎರಡನೇ ಸೂಪರ್&1000 ಪ್ರಶಸ್ತಿಯಿಂದ ಒಂದು ಗೆಲುವಿನ ದೂರದಲ್ಲಿದೆ. ಕಳೆದ ವರ್ಷ ಜೂನ್ನಲ್ಲಿ ಇಂಡೋನೇಷ್ಯಾ ಓಪನ್ ಜಯಿಸಿತ್ತು.