ASIAN GAMES: ಇಂದು ಸಮಾರೋಪ ಸಮಾರಂಭ

2 ಚಿನ್ನ ಸಹಿತ ತ್ರಿವಳಿ ಪದಕ ವಿಜೇತೆ ಶೂಟರ್​ ನೀರೂ ಢಂಡಾ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
asian games
ನೀರೂ ಢಂಡಾಏಜೆನ್ಸಿ
Published on: 

ನಗೋಯಾ: ಮಳೆ ಅಡಚಣೆ, ವಸತಿ ಸಮಸ್ಯೆಯ ನಡುವೆ ಆರಂಭಗೊಂಡರೂ ಯಶಸ್ವಿಯಾಗಿ ಆಯೋಜನೆಗೊಂಡಿರುವ ಏಷ್ಯನ್​ ಗೇಮ್ಸ್​ 20ನೇ ಆವೃತ್ತಿಗೆ ಭಾನುವಾರ ತೆರೆ ಬೀಳಲಿದೆ. ನಗೋಯಾದ ಪಲೋಮಾ ಮಿಜುಹೊ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಪಾನ್​ ಸಾಂಸತಿಕ ವೈಭವವನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.

ಜತೆಗೆ 2030ರ ಏಷ್ಯಾಡ್​ ಆತಿಥ್ಯ ವಹಿಸಲಿರುವ ಕತಾರ್​ ದೇಶದ ದೋಹಾ ನಗರಕ್ಕೆ ಏಷ್ಯನ್​ ಒಲಿಂಪಿಕ್​ ಕೌನ್ಸಿಲ್​ನ ಧ್ವಜ ಹಸ್ತಾಂತರವಾಗಲಿದೆ. ಬಳಿಕ ದೋಹಾದ ಕಲಾವಿದರು 2030ರ ನವೆಂಬರ್​ 4ರಿಂದ 19ರವರೆಗೆ ನಿಗದಿಯಾಗಿರುವ 21ನೇ ಆವೃತ್ತಿಗೆ ಏಷ್ಯಾದ ಕ್ರೀಡಾತಾರೆಯರನ್ನು ಆಹ್ವಾನಿಸುವ ಸಾಂಸತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ. 2006ರ ನಂತರ ದೋಹಾ 2ನೇ ಬಾರಿ ಏಷ್ಯಾಡ್​ ಆತಿಥ್ಯ ವಹಿಸಿಕೊಂಡಿದೆ. ಸಮಾರೋಪ ಸಮಾರಂಭದ ಕ್ರೀಡಾಪಟುಗಳ ಪಥ ಸಂಚಲನದಲ್ಲಿ 2 ಚಿನ್ನ ಸಹಿತ ತ್ರಿವಳಿ ಪದಕ ವಿಜೇತೆ ಶೂಟರ್​ ನೀರೂ ಢಂಡಾ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಏಷ್ಯನ್​ ಗೇಮ್ಸ್​ 20ನೇ ಆವೃತ್ತಿಯ ಕೊನೇ ದಿನವಾದ ಭಾನುವಾರ ಈಕ್ವೆಸ್ಟ್ರಿಯನ್​ (ಕುದುರೆ ಸವಾರಿ) ಸ್ಪರ್ಧೆಯಲ್ಲಿ 2 ಚಿನ್ನದ ಪದಕ ವಿಜೇತರ ನಿರ್ಧಾರವಾಗಲಿದೆ.

ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net