ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಪದಕ ಖಚಿತ: ಚಿನ್ನದ ಪದಕಕ್ಕಾಗಿ ಇಂದು ಶ್ರೀಲಂಕಾ ಎದುರು ಹೋರಾಟ

New-Project-40
Published on

ಹಾಂಗ್‌ರೆೌ: ಪೂಜಾ ವಸಾಕರ್ (17ಕ್ಕೆ4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತದ ಮಹಿಳೆಯರ ತಂಡ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಸ್ಪರ್ಧೆಯಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ. ಭಾನುವಾರ ನಡೆದ ಸೆಮಿೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದ ಸ್ಮತಿ ಮಂದನಾ ಹಂಗಾಮಿ ಸಾರಥ್ಯದ ತಂಡ ೈನಲ್‌ಗೇರಿದೆ. ಸೋಮವಾರ ಚಿನ್ನದ ಪದಕಕ್ಕಾಗಿ ಶ್ರೀಲಂಕಾ ಎದುರು ಸೆಣಸಲಿದೆ. ಏಷ್ಯಾಡ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಪದಕ ಇದಾಗಿದೆ.
ಪಿಂಗ್‌ಫೆಂಗ್ ಕ್ಯಾಂಪಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ, 17.5 ಓವರ್‌ಗಳಲ್ಲಿ ಕೇವಲ 51 ರನ್‌ಗಳಿಗೆ ಸರ್ವಪತನ ಕಂಡಿತು. ನಾಯಕಿ ನಿಗರ್ ಸುಲ್ತಾನ (12) ಹೊರತು ಪಡಿಸಿ ಇತರ ಬ್ಯಾಟರ್‌ಗಳು ಎರಡಂಕಿ ಮೊತ್ತ ಕಲೆಹಾಕುವಲ್ಲಿ ವಿಲರಾದರು. ಪ್ರತಿಯಾಗಿ ಭಾರತ 8.2 ಓವರ್‌ಗಳಲ್ಲಿ 2 ವಿಕೆಟ್‌ಗೆ 52 ರನ್‌ಗಳಿಸಿ ಗೆಲುವು ದಾಖಲಿಸಿತು. ಕ್ರೀಡಾಕೂಟಕ್ಕೆ ತೆರಳುವ ಮುನ್ನ ಗಾಯಾಳು ಅಂಜಲಿ ಸರ್ವಾಣಿ ಬದಲಿಗೆ ಕೊನೇಕ್ಷಣದಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಪೂಜಾ ವಸಾಕರ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ವಿಶೇಷವೆನಿಸಿತು.
ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿರುವ ಏಕೈಕ ಕನ್ನಡತಿಯಾಗಿದ್ದಾರೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್‌ರ 2 ಪಂದ್ಯ ನಿಷೇಧ ಪೂರ್ಣಗೊಂಡಿರುವುದರಿಂದ ೈನಲ್‌ನಲ್ಲಿ ಭಾರತ ಅವರ ಸಾರಥ್ಯದಲ್ಲೇ ಆಡುವ ನಿರೀಕ್ಷೆ ಇದೆ. ಕಂಚಿನ ಪದಕಕ್ಕೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಹೋರಾಡಲಿವೆ.
ಬಾಂಗ್ಲಾದೇಶ: 17.5 ಓವರ್‌ಗಳಲ್ಲಿ 51 (ಶೋಭಾನಾ 8, ನೀಗರ್ 12, ರಿತು 8, ನಹೀದಾ 9, ಪೂಜಾ ವಸಾಕರ್ 17ಕ್ಕೆ 4, ರಾಜೇಶ್ವರಿ 8ಕ್ಕೆ 1). ಭಾರತ: 8.2 ಓವರ್‌ಗಳಲ್ಲಿ 2 ವಿಕೆಟ್‌ಗೆ 2 ( ಸ್ಮತಿ 7, ಶೆಾಲಿ 17, ಜೆಮೀಮಾ 20*, ಕನ್ನಿಕಾ1*, ಹೀಮಾ 7ಕ್ಕೆ 1).

ೈನಲ್‌ನಲ್ಲಿ ಲಂಕಾ ಸವಾಲು
ದಿನದ ಇನ್ನೊಂದು ಸೆಮಿೈನಲ್‌ನಲ್ಲಿ ಶ್ರೀಲಂಕಾ ತಂಡ ಹಾಲಿ ಚಾಂಪಿಯನ್ ಎನಿಸಿದ್ದ ಪಾಕಿಸ್ತಾನ ಎದುರು 6 ವಿಕೆಟ್‌ಗಳಿಂದ ಜಯ ಸಾಧಿಸಿ ೈನಲ್‌ಗೇರಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕ್ 9 ವಿಕೆಟ್‌ಗೆ 75 ರನ್‌ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಲಂಕಾ 16.3 ಓವರ್‌ಗಳಲ್ಲಿ 4 ವಿಕೆಟ್‌ಗೆ 77 ರನ್ ಕಲೆಹಾಕಿ ಜಯಿಸಿತು.

52: ಭಾರತ ಎದುರು ಟಿ20ಯಲ್ಲಿ ಬಾಂಗ್ಲಾದೇಶದ ಕನಿಷ್ಠ ಮೊತ್ತ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net