ಏಷ್ಯನ್ ಗೇಮ್ಸ್‌ ಪ್ರಿ ಕ್ವಾರ್ಟರ್‌ಫೈನಲ್‌ಗೇರಿದ ಟೇಬಲ್ ಟೆನಿಸ್ ತಂಡಗಳು

New-Project-30-1
Published on

ಹಾಂಗ್‌ರೆೌ: ಭಾರತದ ಪುರುಷ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡಗಳು ಏಷ್ಯನ್ ಗೇಮ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ೈನಲ್‌ಗೆ ಲಗ್ಗೆಯಿಟ್ಟಿವೆ. ಶನಿವಾರ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪುರುಷರ ಹಾಗೂ ಮಹಿಳಾ ತಂಡಗಳು 3-0 ಅಂತರದಿಂದ ಕ್ರಮವಾಗಿ ತಜಿಕಿಸ್ತಾನ ಮತ್ತು ನೇಪಾಳ ಎದುರು ಗೆಲುವು ದಾಖಲಿಸಿದವು.

ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಯೆಮೆನ್ ಮತ್ತು ಸಿಂಗಾಪುರವನ್ನು ಮಣಿಸಿದ್ದ ಭಾರತೀಯ ಪುರುಷರ ತಂಡದ ಅನುಭವಿ ಜಿ. ಸತ್ಯನ್ ಹಾಗೂ 41 ವರ್ಷದ ಶರತ್ ಕಮಲ್ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಿತ್ತು. ಹ್ಯಾಟ್ರಿಕ್ ಗೆಲುವು ದಾಖಲಿಸಿದ ಭಾರತ ಪುರುಷರ ತಂಡ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದಿಸಿತು. 16ರ ಘಟ್ಟದಲ್ಲಿ ಕಜಾಕ್‌ಸ್ತಾನವನ್ನು ಎದುರಿಸಲಿದೆ. ಮಹಿಳಾ ತಂಡ ಅನುಭವಿ ಮನಿಕಾ ಬಾತ್ರಾಗೆ ವಿಶ್ರಾಂತಿ ನೀಡಿತ್ತು.

ಪುರುಷರ ವಿಭಾಗದಲ್ಲಿ ಮಾನವ್ ಠಾಕರ್ 11-8, 11-5, 11-8 ರಿಂದ ಅಫ್ಜಲ್ಖೋನ್ ಮಹ್ಮುದೋವ್‌ರನ್ನು ಮಣಿಸಿ ಉತ್ತಮ ಆರಂಭ ನೀಡಿದರು. ಮನವ್ ಷಾ 13-11, 11-7, 11-5 ರಿಂದ ಉಬೈದುಲ್ಲೊ ಸುಲ್ಟೋನೊವ್ ವಿರುದ್ಧ ಜಯಗಳಿಸಿ ಭಾರತದ 2-0 ಮುನ್ನಡೆಯನ್ನು ಹಿಗ್ಗಿಸಿದರು. ಹರ್ಮೀತ್ ದೇಸಾಯಿ 11-1, 11-3, 11-5 ಇಬ್ರೋಕಿಮ್ ಇಸ್ಮೊಯಿಲ್ಜೋಡಾ ವಿರುದ್ಧ ಸುಲಭ ಜಯದೊಂದಿಗೆ ಗೆಲುವಿನ ಅಂತರ ಹಿಗ್ಗಿಸಿದರು. ಇದರೊಂದಿಗೆ

ಮಹಿಳಾ ತಂಡದ ಪರ ದಿಯಾ ಚಿತಾಲೆ 11-1, 11-6, 11-8 ನೇಪಾಳ ಸಿಕ್ಕಾ ಶ್ರೇಷ್ಠಾ ಅವರನ್ನು ಸೋಲಿಸಿದರೆ, ಅಹಿಕಾ ಮುಖರ್ಜಿ 11-3, 11-7, 11-2 ನಬಿತಾ ಶ್ರೇಷ್ಠಾ ವಿರುದ್ಧ ಜಯ ಸಾಧಿಸಿದರು. ಸುತೀರ್ಥ ಮುಖರ್ಜಿ 11-1, 11-5, 11-2 ಇವಾನಾ ಥಾಪಾರನ್ನು ಮಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net