

ಮೊಹಾಲಿ: ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಏಳನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗುರುವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ಜಪಾನ್ ಸವಾಲು ಎದುರಿಸಲಿದ್ದು, ಹರ್ಮಾನ್ಪ್ರೀತ್ ಸಿಂಗ್ ಪಡೆ ಟ್ರೋಫಿ ಉಳಿಸಿಕೊಳ್ಳುವ ನಿರೀೆ ಹರಡಿದೆ. ಬುಧವಾರ ನಡೆದ ಸೆಮಿಫೈನಲ್ನಲ್ಲಿ ಗೋಲಿನ ಮಳೆಹರಿಸಿದ ಭಾರತ ತಂಡ 8&1 ಅಂತರದಿಂದ ಕೊರಿಯಾ ಎದುರು ಗೆದ್ದು ಬೀಗಿತು.
ಒಲಿಂಪಿಯನ್ ಬಲ್ಬೀರ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಭಾರತ ಹಿಡಿತ ಸಾಧಿಸಿತು. ಶಿಲಾನಂದ್ ಲಾಕ್ರ (4, 13ನೇ ನಿಮಿಷ), ದಿಲ್ಪ್ರೀತ್ ಸಿಂಗ್ (21, 25ನೇ ನಿಮಿಷ) ತಲಾ ಎರಡು ಗೋಲು ಸಿಡಿಸಿದರೆ, ಹರ್ಮಾನ್ಪ್ರೀತ್ (9), ಸುಖ್ಜೀತ್ ಸಿಂಗ್ (21), ಅಂಗದ್ ಬಿರ್ ಸಿಂಗ್ (36) ಹಾಗೂ ವಿವೇಕ್ ಸಾಗರ್ ಪ್ರಸಾದ್ (54) ತಲಾ ಗೋಲುಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು. ರೌಂಡ್ ರಾಬಿನ್ ಲೀಗ್ನಲ್ಲೂ 8&0 ರಿಂದ ಭಾರತ, ಕೊರಿಯಾ ತಂಡವನ್ನು ಮಣಿಸಿತ್ತು.
ಜಪಾನ್ ಎದುರಾಳಿ: ಮೊದಲ ಸೆಮಿಫೈನಲ್ನಲ್ಲಿ ಜಪಾನ್ ತಂಡ 5&3 ರಿಂದ ಶೂಟೌಟ್ನಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ ಗೋಲುರಹಿತವಾಗಿತ್ತು.
7. ಇದುವರೆಗಿನ 9 ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದ 7ನೇ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ 2011, 2016, 2018 (ಜಂಟಿ), 2023, 2024ರಲ್ಲಿ ಚಾಂಪಿಯನ್ ಎನಿಸಿದ್ದು, 2012ರಲ್ಲಿ ರನ್ನರ್ ಅಪ್ ಆಗಿದೆ.