

ಬೆಂಗಳೂರು: ಬೆನ್ನು ನೋವಿನ ಶಸ ಚಿಕಿತ್ಸೆಯ ನಂತರ ಸಂಪೂರ್ಣ ಫಿಟ್ನೆಸ್ ಪಡೆಯಲು ಸಮಯ ತೆಗೆದುಕೊಳ್ಳುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂಬರುವ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದರೊಂದಿಗೆ ಟೀಮ್ ಇಂಡಿಯಾ ಮಧ್ಯಕ ಕ್ರಮಾಂಕದ ಸಮಸ್ಯೆ ಮುಂದುವರಿಯಲಿದ್ದು, ಭಾನುವಾರ (ಆ.20) ತಂಡದ ಆಯ್ಕೆ ನಡೆಯಲಿದೆ.
ಬೆಂಗಳೂರಿನ ಎನ್‌ಸಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರು ಬ್ಯಾಟಿಂಗ್ ನಡೆಸಿದ್ದರು. ಆದರೆ ಶ್ರೇಯಸ್ ಅಯ್ಯರ್ ಶೇ 100. ರಷ್ಟು ಫಿಟ್ನೆಸ್ ಸಾಧಿಸುವಲ್ಲಿ ವಿಲವಾಗಿದ್ದಾರೆ ಎನ್ನಲಾಗಿದೆ ಇನ್ನೂ ಕೆಎಲ್ ರಾಹುಲ್ ಸಂಪೂರ್ಣ ಚೇತರಿಕೆ ಕಂಡಿದ್ದು, ಈಗಾಗಲೆ ವಿಕೆಟ್ ಕೀಪಿಂಗ್ ಸಹ ಆರಂಭಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ನೆಸ್ ಜತೆಗೆ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಗೊಂದಲವಿದೆ. ಇಬ್ಬರು ಬ್ಯಾಟರ್‌ಗಳು ಶುಕ್ರವಾರ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದು, ಪರೀಕ್ಷೆಯ ಅಂತಿಮ ವರದಿಯ ಬಳಿಕ ಏಷ್ಯಾಕಪ್ ಲಭ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಅದಕ್ಕೆ ಅಂತಿಮ ಕ್ಷಣದವರೆಗೂ ಬಿಸಿಸಿಐ ಕಾದು ನೋಡುವ ತಂತ್ರವನ್ನು ಅನುಸರಿಸಿ ಏಷ್ಯಾಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ ತಿಂಗಳಿನಲ್ಲಿ ಕೊನೆಯದಾಗಿ ಸ್ಫರ್ಧಾತ್ಮಕ ಕ್ರಿಕೆಟ್ ಆಡಿದ್ದ ಶ್ರೇಯಸ್ ಅಯ್ಯರ್ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ಮೇನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು.
ಏಷ್ಯಾಕಪ್‌ಗೆ ಸ್ಯಾಮ್ಸನ್ ಅನುಮಾನ?: ಶ್ರೇಯಸ್ ಅಯ್ಯರ್ ಏಷ್ಯಾಕಪ್ ಅಲಭ್ಯರಾದರೆ ಮಧ್ಯಮ ಕ್ರಮಾಂಕ ಸಮಸ್ಯೆಗೆ ಪರಿಹಾರ ಪಡೆಯಲು ಟೀಮ್ ಇಂಡಿಯಾ ಮತ್ತೆ ಪ್ರಯೋಗ ನಡೆಸುವ ಸ್ಥಿತಿ ಎದುರಾಗಲಿದೆ. ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿವೆ. ಇನ್ನೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ದೊರೆತ ಸೀಮಿತ ಅವಕಾಶದಲ್ಲಿ ಮಿಂಚಲು ವಿಲವಾಗಿರುವ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಏಷ್ಯಾಕಪ್ ತಂಡದಿಂದ ಗೇಟ್ ಪಾಸ್ ನೀಡುವ ಸಾಧ್ಯತೆಗಳಿವೆ. ಅವರ ಬದಲಿಗೆ ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರಿಗೆ ಚಾನ್ಸ್ ನೀಡುವ ಸಂಭವವಿದೆ. ಕೆಎಲ್ ರಾಹುಲ್ ಫಿಟ್ ಎನಿಸಿದರೆ ಏಷ್ಯಾಕಪ್‌ಗೆ ಮೊದಲ ಆಯ್ಕೆಯ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿರಲಿದ್ದು, ಇಶಾನ್ ಕೀಶನ್ ಎರಡನೇ ಆಯ್ಕೆ ಎನಿಸಲಿದ್ದಾರೆ.