ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದ ಬಾಂಗ್ಲಾದೇಶ ಆರಂಭಿಕ ಬ್ಯಾಟರ್

New Project (1)
Published on

ಢಾಕಾ: ಬಾಂಗ್ಲಾದೇಶ ತಂಡದ ವಿಕೆಟ್ ಕೀಪರ್- ಬ್ಯಾಟರ್ ಲಿಟನ್‌ದಾಸ್ ಅನಾರೋಗ್ಯದಿಂದಾಗಿ

ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುಂಚಿತವಾಗಿ ಬಾಂಗ್ಲಾ ತಂಡಕ್ಕೆ ಆಘಾತ ಕಂಡಿದೆ.

ವೈರಲ್ ಜ್ವರದಿಂದ ಬಳಲುತ್ತಿರುವ ಲಿಟನ್ ದಾಸ್ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿಲ್ಲ. ಅವರ ಬದಲಿಗೆ 30 ವರ್ಷದ,ವಿಕೆಟ್ ಕೀಪರ್-ಬ್ಯಾಟರ್ ಅನಾಮುಲ್ ಹಕ್ ಬಿಜೋಯ್‌ಗೆ ಸ್ಥಾನ ಕಲ್ಪಿಸಲಾಗಿದೆ. ದೇಶೀಯ ಋತುವಿನಲ್ಲಿ ಅನಾಮುಲ್ ಉತ್ತಮ ರನ್ ಕಲೆಹಾಕಿದ್ದು, ಲಿಟನ್ ದಾಸ್ ಗೈರಿನಲ್ಲಿ ತಂಡಕ್ಕೆ ಅಗ್ರ ಕ್ರಮಾಂಕ್ ಬ್ಯಾಟರ್ ಅವಶ್ಯವಿದೆ ಎಂದು 022ರ ಡಿಸೆಂಬರ್‌ನಲ್ಲಿ ಕೊನೆಯದಾಗಿ ಆಡಿದ್ದ ಅನಾಮುಲ್, 44 ಏಕದಿನ ಪಂದ್ಯಗಳಲ್ಲಿ 1,254 ರನ್ ಕಲೆಹಾಕಿದ್ದಾರೆ. ಏಷ್ಯಾಕಪ್‌ನ ಸಂಭಾವ್ಯ ತಂಡ ಹಾಗೂ ಮೀಸಲು ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆಯದ ಅನಾಮುಲ್ ಹಕ್ ಆಯ್ಕೆ ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.

ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರ ಗೈರಿನಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಗುರುವಾರ ಪರಸ್ಪರ ಎದುರಾಗಲಿದ್ದು, ಗೆಲುವಿನ ಆರಂಭ ಕಾಣುವ ನಿರೀಕ್ಷೆಯಲ್ಲಿವೆ.

ಟಿ20 ಮಾದರಿಯಲ್ಲಿ ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಶ್ರೀಲಂಕಾ ತಂಡ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ, ದುಶ್ಮಂತ್ ಚಮೀರಾ, ಲಹಿರು ಕುಮಾರ, ದಿಲ್ಶಾನ್ ಮಧುಶಂಕ ಅನುಪಸ್ಥಿತಿಯಲ್ಲಿ ಆಡಲಿದೆ. ಹಾಲಿ ವರ್ಷದಲ್ಲಿ ಏಕದಿನ ಮಾದರಿಯಲ್ಲಿ ನಿರೀಕ್ಷಿತ ನಿರ್ವಹಣೆ ತೋರವಲ್ಲಿ ಲಂಕಾ ತಂಡ ವಿಲವಾಗಿದ್ದು, ಮುಂಬರುವ ವಿಶ್ವಕಪ್‌ಗೆ ಮುನ್ನ ಲಯಕ್ಕೆ ಮರಳುವ ಹಂಬಲದಲ್ಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net