

ಲಾಹೋರ್: ಏಷ್ಯಾಕಪ್ ಏಕದಿನ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಅ್ಘಾನಿಸ್ತಾನ ತಂಡ ಬಿ ಗುಂಪಿನ ಕೊನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸವಾಲು ಎದುರಿಸಲಿದೆ. ಸೂಪರ್-4 ಹಂತಕ್ಕೇರಲು ಅ್ಘಾನಿಸ್ತಾನಕ್ಕೆ ದೊಡ್ಡ ಅಂತರದ ಗೆಲುವು ಅಗತ್ಯವಿದ್ದು, ಈ ಪಂದ್ಯ ನಾಕೌಟ್ ಎನಿಸಿದೆ. ಗುಂಪಿನ ಅಗ್ರ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶಿಸಲಿವೆ.
ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿದ ಶ್ರೀಲಂಕಾ ಉತ್ತಮ ರನ್‌ರೇಟ್‌ನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಹೆಚ್ಚಿನ ಒತ್ತಡವಿಲ್ಲದೆ ಕಣಕ್ಕಿಳಿಯಲಿದೆ. ಆದರೆ ಲಂಕಾ ಟೂರ್ನಿಯ ಜಂಟಿ ಆತಿಥೇಯ ದೇಶವಾಗಿದ್ದರೂ, ಈ ಪಂದ್ಯವನ್ನು ತವರಿಗೆ ಬದಲಾಗಿ ಪಾಕಿಸ್ತಾನದಲ್ಲಿ ಆಡಲಿದೆ ಎಂಬುದು ಗಮನಾರ್ಹ. ಬಾಂಗ್ಲಾ-ಆ್ಘನ್ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸಿದ್ದ ಗದ್ದಾಫಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ಒದಗಿಸಲಿದೆ. ಪ್ರಮುಖ ನಾಲ್ವರು ಆಟಗಾರರ ಅಲಭ್ಯತೆಯ ನಡುವೆಯೂ ಶ್ರೀಲಂಕಾದ ಯುವ ಬೌಲಿಂಗ್ ಪಡೆಯ ಉತ್ತಮ ಪ್ರದರ್ಶನ ತಂಡದ ಬಲ ಹೆಚ್ಚಿಸಿದೆ.
ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಲಿರುವ ಅ್ಘಾನಿಸ್ತಾನಕ್ಕೆ ಆರಂಭಿಕ ರಹಮಾನುಲ್ಲಾ ಗುರ್ಬಜ್ ಮತ್ತು ಇಬ್ರಾಹಿಂ ಜದ್ರಾನ್ ಾರ್ಮ್‌ನಲ್ಲಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಲವಾಗಿರುವ ರಶೀದ್ ಖಾನ್ ಮೇಲೆ ಹೆಚ್ಚಿನ ಒತ್ತಡವಿದ್ದು, ಲಂಕಾ ಎದುರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವ ಹಂಬಲ ಆ್ಘನ್ ತಂಡದ್ದಾಗಿದೆ. ಎಲ್ಲ ವಿಭಾಗಗಳಲ್ಲೂ ತಂಡದ ಪ್ರದರ್ಶನ ಸುಧಾರಿಸುವ ಅಗತ್ಯವಿದೆ ಎಂದು ಅ್ಘಾನಿಸ್ತಾನ ನಾಯಕ ಹಶ್ಶತ್ ಉಲ್ಲಾ ಹೇಳಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.