ಐಪಿಎಲ್​ಗಾಗಿ ಏಷ್ಯಾಕಪ್ ರದ್ದಾಗಲ್ಲ!

Asia Cup
Published on

ಕರಾಚಿ: ಲಾಕ್​ಡೌನ್ ವಿಸ್ತರಣೆಯಿಂದಾಗಿ ಐಪಿಎಲ್ 13ನೇ ಆವೃತ್ತಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಟೂರ್ನಿ ಮರುನಿಗದಿಗೆ ವಿವಿಧ ದಿನಾಂಕಗಳ ಪರಿಶೀಲನೆ ನಡೆಯುತ್ತಿದೆ.

ಈ ಪೈಕಿ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟಿ20 ಟೂರ್ನಿಯನ್ನು ರದ್ದುಗೊಳಿಸಿ, ಐಪಿಎಲ್ ಆಯೋಜಿಸುವ ಯೋಜನೆಯೂ ಒಂದಾಗಿದೆ. ಆದರೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹಸಾನ್ ಮಣಿ ತಗಾದೆ ತೆಗೆದಿದ್ದಾರೆ. ಏಷ್ಯಾದ ಕ್ರಿಕೆಟ್ ಅಭಿವೃದ್ಧಿಗೆ ಈ ಟೂರ್ನಿ ಯಿಂದ ಬರುವ ಆದಾಯವೇ ಪ್ರಮುಖವಾದುದು. ಹೀಗಾಗಿ ಪಾಕಿಸ್ತಾನ ಏಷ್ಯಾಕಪ್ ರದ್ದುಗೊಳಿಸಲು ಸಮ್ಮತಿಸುವುದಿಲ್ಲ’ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ ಮುಂದೂಡಿಕೆಯಾದರೂ, ವಿಶ್ವ ಕ್ರಿಕೆಟ್​ನಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ ಎಂದು ಮಣಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net