

ಪಲ್ಲೆಕಿಲೆ: ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರ ಗೈರಿನಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಗುರುವಾರ ಪರಸ್ಪರ ಎದುರಾಗಲಿದ್ದು, ಗೆಲುವಿನ ಆರಂಭ ಕಾಣುವ ನಿರೀಕ್ಷೆಯಲ್ಲಿವೆ.ಕಳೆದ ವರ್ಷದ ಟಿ20 ಮಾದರಿಯ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಲಂಕಾ ಈ ಬಾರಿ ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ, ದುಶ್ಮಂತ್ ಚಮೀರಾ, ಲಹಿರು ಕುಮಾರ, ದಿಲ್ಶಾನ್ ಮಧುಶಂಕ ಅನುಪಸ್ಥಿತಿಯ ಹಿನ್ನಡೆ ಹೊಂದಿದೆ.
ಹಾಲಿ ವರ್ಷದಲ್ಲಿ ಏಕದಿನ ಮಾದರಿಯಲ್ಲಿ ನಿರೀಕ್ಷಿತ ನಿರ್ವಹಣೆ ತೋರವಲ್ಲಿ ಲಂಕಾ ತಂಡ ವಿಲವಾಗಿದ್ದು, ಮುಂಬರುವ ವಿಶ್ವಕಪ್‌ಗೆ ಮುನ್ನ ಲಯಕ್ಕೆ ಮರಳುವ ಹಂಬಲದಲ್ಲಿದೆ. ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೀಲಂಕಾಕ್ಕೆ ಬ್ಯಾಟರ್‌ಗಳಾದ ಪಥುಮ್ ನಿಸ್ಸಂಕಾ (687), ದಿಮುತ್ ಕರುಣರತ್ನೆ (481) ಹಾಗೂ ಚರಿತ್ ಅಸಲಂಕ (481) ಆಧಾರಸ್ತಂಭ ಎನಿಸಿದ್ದಾರೆ. ನಾಯಕ ದುಸುನ್ ಶನಕ ಕಳಪೆ ಾರ್ಮ್‌ನಿಂದ ರನ್ ಬರ ಎದುರಿಸುತ್ತಿದ್ದಾರೆ. ಬಾಂಗ್ಲಾದೇಶಕ್ಕೆ ಅನುಭವಿ ಬ್ಯಾಟರ್ ತಮೀಮ್ ಇಕ್ಬಾಲ್, ಲಿಟನ್ ದಾಸ್ ಅನುಪಸ್ಥಿತಿ ಕಾಡಲಿದೆ. ಆಲ್ರೌಂಡರ್ ಶಕೀಬ್ ಅಲ್ ಹಸನ್‌ಗೆ ಮರಳಿ ನಾಯಕತ್ವ ನೀಡಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಮುಸ್ತಾಪಿಜುರ್ ರೆಹಮಾನ್, ಇಸ್ಲಾಂ ಹಾಗೂ ಟಸ್ಕಿನ್ ಅಹ್ಮದ್ ಬಲವಿದೆ. ಎರಡೂ ತಂಡಗಳಿಗೆ ಗೆಲುವಿನ ಜತೆಗೆ ರನ್ ರೇಟ್ ಸಹ ಪ್ರಮುಖವಾಗಿದೆ. ಪಂದ್ಯಕ್ಕೆ ಮಳೆ ಆಡಚಣೆ ಉಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಟೂರ್ನಿಯಿಂದ ಲಿಟನ್ ದಾಸ್ ಔಟ್ : ಬಾಂಗ್ಲಾದೇಶ ತಂಡದ ವಿಕೆಟ್ ಕೀಪರ್- ಬ್ಯಾಟರ್ ಲಿಟನ್‌ದಾಸ್ ಅನಾರೋಗ್ಯದಿಂದಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುಂಚಿತವಾಗಿ ಬಾಂಗ್ಲಾ ತಂಡ ಆಘಾತ ಕಂಡಿದೆ. ವೈರಲ್ ಜ್ವರದಿಂದ ಬಳಲುತ್ತಿರುವ ಲಿಟನ್ ದಾಸ್ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿಲ್ಲ. ಅವರ ಬದಲಿಗೆ 30 ವರ್ಷದ,ವಿಕೆಟ್ ಕೀಪರ್-ಬ್ಯಾಟರ್ ಅನಾಮುಲ್ ಹಕ್ ಬಿಜೋಯ್‌ಗೆ ಸ್ಥಾನ ಕಲ್ಪಿಸಲಾಗಿದೆ.