

Asia Cup: ಏಷ್ಯಾ ಕಪ್-2025ರ ಅಂತಿಮ ಸೂಪರ್-4 ಪಂದ್ಯದಲ್ಲಿ ರೋಚಕವಾಗಿ ಸೂಪರ್ ಓವರ್ನಲ್ಲಿ ಶ್ರೀಲಂಕಾ ತಂಡದ ವಿರುದ್ದ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದೆ.
ದುಬೈನಲ್ಲಿ ನಡೆದ ಇಂಡಿಯಾ-ಶ್ರೀಲಂಕಾ ಪಂದ್ಯ ರೋಚಕವಾಗಿತ್ತು. ಪಂದ್ಯಾವಳಿಯ 18ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ, ಟೀಂ ಇಂಡಿಯಾವನ್ನು 20 ಓವರ್‌ಗಳಲ್ಲಿ 5 ವಿಕೆಟ್ಗಳ 202 ರನ್‌ಗಳಿಗೆ ಕಟ್ಟಿ ಹಾಕಿತು. ಆದರೆ ಅಂತಿಮವಾಗಿ ಸೂಪರ್ ಓವರ್ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತು.
ಭಾನುವಾರ ನಡೆಯಲಿರುವ ಟೀಂ ಇಂಡಿಯಾ-ಪಾಕಿಸ್ತಾನ ಪಂದ್ಯ ಫೈನಲ್ ಪಂದ್ಯವನ್ನು ನಿರ್ಧರಿಸುವ ಹಿನ್ನೆಲೆ ಈ ಪಂದ್ಯ ಅಂತಹ ಮಹತ್ವವನ್ನು ಪಡೆದಿರಲಿಲ್ಲ. ಆದರೆ ಸೆಕೆಂಡ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಟೀಂ ಇಂಡಿಯಾ ರನ್ ಅನ್ನು ಚೇಸ್ ಮಾಡಿತು. ಪಾಥುಮ್ ನಿಸ್ಸಂಕಾ ಮತ್ತು ಕುಸಲ್ ಪೆರೆರಾ ಎರಡನೇ ವಿಕೆಟ್‌ಗೆ 70 ಎಸೆತಗಳಲ್ಲಿ 127 ರನ್‌ಗಳ ಜೊತೆಯಾಟ ನಡೆಸಿ ಕಂಗೆಡಿಸಿದ್ದರು. ಕುಸೆಲಾ ಪೆರರಾ 58 ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತದ ಬೌಲರ್ಗಳು ಟೈ ಆಗಲು ಕಾರಣರಾದರು.
ಅಂತಿಮವಾಗಿ ಸೂಪರ್ ಓವರ್ ಕೊಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ತಂಡ ಕೇವಲ 2 ರನ್ ಗಳಿಸಿತು. ಅಂತಿಮವಾಗಿ ಇಂಡಿಯಾ ಪರ ಬ್ಯಾಟ್ ಮಾಡಿ ನಾಯಕ ಸೂರ್ಯಕುಮಾರ್ ಯಾದವ್ ಮೊದಲ 2 ಎಸೆತಗಳಲ್ಲಿ 3 ರನ್ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿದರು. (ಏಜೆನ್ಸೀಸ್)