

ಡೆಹ್ರಾಡೂನ್/ಹಲ್ದಾವಾನಿ: ದೇವಭೂಮಿ ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿರುವ ಕರ್ನಾಟಕದ ಕ್ರೀಡಾಪಟುಗಳು ಕೂಟದ 6ನೇ ದಿನ ಮತ್ತೆ 2 ಚಿನ್ನ, 4 ರಜತ ಹಾಗೂ 4 ಕಂಚು ಸಹಿತ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ತಂಡ 15 ಚಿನ್ನ, 9 ಬೆಳ್ಳಿ ಹಾಗೂ 9 ಕಂಚು ಸಹಿತ 33 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಸರ್ವೀಸಸ್ ತಂಡ 17 ಚಿನ್, 9 ರಜತ, 7 ಕಂಚು ಸಹಿತ 33 ಮೆಡಲ್‌ನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಭಾನುವಾರ ನಡೆದ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜು ಪಟುಗಳು 2 ಚಿನ್ನ,4 ರಜತ ಹಾಗೂ 1 ಕಂಚು ಗೆದ್ದರು. ಮಹಿಳೆಯರ 50 ಮೀಟರ್ ಬಟರ್ ್ಲೈ ಸ್ಪರ್ಧೆಯಲ್ಲಿ ನೀನಾ ವೆಂಕಟೇಶ್ 28.38 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, 14 ವರ್ಷದ ಧಿನಿಧಿ ದೇಸಿಂಘು 28.80 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಜಯಿಸಿದರು. ಮಹಾರಾಷ್ಟ್ರದ ಋಜುತಾ (29.12 ಸೆಕೆಂಡ್) ಕಂಚಿಗೆ ತೃಪ್ತಿಪಟ್ಟರು.
1500 ಮೀಟರ್ ಫ್ರೀಸ್ಟೈಲ್‌ನಲ್ಲಿ ಅದಿತಿ ಎನ್ ಮೂಳೆ 18 ನಿಮಿಷ 11.92 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರೆ, ಕರ್ನಾಟಕದವರೇ ಆದ ಶಿರಿನ್ 18 ನಿಮಿಷ 14.98 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. ದೆಹಲಿಯ ಭವ್ಯಾ ಸಚ್‌ದೇವ್ (17ನಿ,42.81ಸೆ) ಚಿನ್ನದ ಪದಕ ಒಲಿಸಿಕೊಂಡರು.
ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ 56.26 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದರೆ, ಪ್ರತಿಸ್ಪರ್ಧಿ ರಾಜ್ಯದ ಆಕಾಶ್ ಮಣಿ 56.36 ಸೆಕೆಂಡ್‌ಗಳಲ್ಲಿ ರಜತ, ಮಹಾರಾಷ್ಟ್ರದ ರಿಷಭ್ ದಾಸ್ 56.80 ಸೆಕೆಂಡ್ ಕಂಚು ಜಯಿಸಿದರು.
400 ಮೀಟರ್ ಫ್ರಿಸ್ಟೈಲ್‌ನಲ್ಲಿ ಅನೀಶ್ ಎಸ್ ಗೌಡ 4 ನಿಮಿಷ 0.45ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿ ರಾಜ್ಯದ ಪದಕ ಪಟ್ಟಿಗೆ ಮತ್ತೊಂದು ರಜತ ಸೇರಿಸಿದರು. ದೆಹಲಿಯ ಕುಶಾಗ್ರ ರಾವತ್ (3ನಿ,57.89ಸೆ), ಗುಜರಾತ್‌ನ ಆರ್ಯನ್ ನೆಹ್ರಾ (4ನಿ,2.60 ಸೆ) ಕ್ರಮವಾಗಿ ಬಂಗಾರ, ಕಂಚು ಜಯಿಸಿದರು.
ಕಂಚು ಗೆದ್ದ ದಿವ್ಯಾ, ಉಷಾ: ಮಹಿಳೆಯರ ಶೂಟಿಂಗ್ ಸ್ಪರ್ಧೆಯ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಕರ್ನಾಟಕದ ಟಿ.ಎಸ್. ದಿವ್ಯಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ೈನಲ್‌ನಲ್ಲಿ 27 ಅಂಕ ಕಲೆಹಾಕಿದ ದಿವ್ಯಾ ಮೂರನೇ ಸ್ಥಾನ ಪಡೆದರು. ಒಲಿಂಪಿಯನ್ ಮಹಾರಾಷ್ಟ್ರದ ರಾಹಿ ಸರ್ನೋಬತ್ (35) ಚಿನ್ನ, ಪಂಜಾಬ್‌ನ ಸಿಮ್ರಾನ್‌ಪ್ರೀತ್ ಕೌರ್ ಬ್ರಾರ್ (34) ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ ವೇಯ್ಟಲಿಫ್ಟಿಂಗ್ 87 ಕೆಜಿ ವಿಭಾಗದ ಸ್ಪರ್ಧೆಯ ಸ್ನಾೃಚ್, ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟಾರೆ 197 ಕೆಜಿ ಭಾರ ಎತ್ತಿದ ಎಸ್.ಆರ್.ಉಷಾ ಕಂಚು ಜಯಿಸಿ ವೇಯ್ಟಲಿಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಕೂಟದ ಮೊದಲ ಪದಕ ತಂದುಕೊಟ್ಟರು. ತಮಿಳುನಾಡಿದ ಅರೋಕಿಯಾ ಅಲಿಶ್ (221 ಕೆಜಿ) ಚಿನ್ನ, ಅಸ್ಸಾಂನ ಮೊದುಸ್ಮತಾ ಬರುವಾ (208) ಬೆಳ್ಳಿ ಗೆದ್ದುಕೊಂಡರು.
ಬಾಸ್ಕೆಟ್‌ಬಾಲ್‌ನಲ್ಲಿ ಮೂರನೇ ಸ್ಥಾನ: ಒಂದು ಅಂಕದ ರೋಚಕ ಗೆಲುವಿನೊಂದಿಗೆ ಕರ್ನಾಟಕದ ಮಹಿಳೆಯರ 5/5 ಬಾಸ್ಕೆಟ್‌ಬಾಲ್ ತಂಡ ಕಂಚಿನ ಪದಕ ಒಲಿಸಿಕೊಂಡಿತು. ಕಂಚಿನ ಪದಕಕ್ಕಾಗಿ ನಡೆದ ಪ್ಲೇಆ್ನಲ್ಲಿ ಕರ್ನಾಟಕ ತಂಡ 77-76 ಅಂತರದಿಂದ ಪಂಜಾಬ್ ಎದುರು ಗೆದ್ದು ಬೀಗಿತು. ಕೇರಳ ತಂಡವನ್ನು 46-79 ರಿಂದ ಮಣಿಸಿದ ತಮಿಳುನಾಡು ಸ್ವರ್ಣ ಪದಕ ಜಯಿಸಿತು. ಇದರೊಂದಿಗೆ ಬಾಸ್ಕೆಟ್‌ಬಾಲ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪ್ರಾಬಲ್ಯ ಸಾಧಿಸಿದವು.
ಹಿಮಾಚಲ ಪ್ರದೇಶ ಹ್ಯಾಟ್ರಿಕ್ ಕಿರೀಟ: ಮಹಿಳೆಯರ ಕಬಡ್ಡಿ ಸ್ಪರ್ಧೆಯಲ್ಲಿ ಸತತ ಮೂರನೇ ಆವೃತ್ತಿಯಲ್ಲೂ ಹಿಮಾಚಲ ಪ್ರದೇಶ ಚಾಂಪಿಯನ್ ಎನಿಸಿಕೊಂಡಿದೆ. ೈನಲ್‌ನಲ್ಲಿ ಹರಿಯಾಣ ಎದುರು 22-27 ಅಂಕಗಳಿಂದ ಹಿಮಾಚಲ ಪ್ರದೇಶ ಗೆಲುವು ದಾಖಲಿಸಿ ಈ ಸಾಧನೆ ಮಾಡಿತು. ಕಂಚಿನ ಪದಕ ಮಹಾರಾಷ್ಟ್ರ ಹಾಗೂ ರಾಜಸ್ಥಾನ ಪಾಲಾಯಿತು. ಪುರುಷರ ವಿಭಾಗದಲ್ಲಿ ಉತ್ತರ ಪ್ರದೇಶ 57-43ರಿಂದ ಚಂಡೀಗಢ ಎದುರು ಗೆದ್ದು, ಕಳೆದ 3 ವರ್ಷಗಳಲ್ಲಿ 2ನೇ ಬಾರಿ ಬಂಗಾರ ಬಾಚಿಕೊಂಡಿದೆ. ಹರಿಯಾಣ ಮತ್ತು ಸರ್ವೀಸಸ್ ತಂಡಗಳು ಮೂರನೇ ಸ್ಥಾನಕ್ಕೆ ಸಮಾಧಾನ ಕಂಡವು.
ರಾಷ್ಟ್ರೀಯ ದಾಖಲೆ ಬರೆದ ಆಶಿ ಚೌಕ್ಸಿ
ಏಷ್ಯನ್ ಗೇಮ್ಸ್ ಪದಕ ವಿಜೇತೆ ಆಶಿ ಚೌಕ್ಸಿ ಮಹಿಳೆಯರ 50 ಮೀಟರ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ನೂತನ ರಾಷ್ಟ್ರೀಯ ದಾಖಲೆ ರಚಿಸಿದ್ದಾರೆ. ಮಧ್ಯಪ್ರದೇಶದ 22 ವರ್ಷದ ಆಶಿ ಅರ್ಹತಾ ಸುತ್ತಿನಲ್ಲಿ 598 ಅಂಕ ಕಲೆಹಾಕುವ ಮೂಲಕ ಅಗ್ರಸ್ಥಾನಿಯಾಗಿ ೈನಲ್ ಪ್ರವೇಶಿಸಿದರು. ಇದು ವಿಶ್ವದಾಖಲೆಯ 596 ಅಂಕಕ್ಕೂ ಅಧಿಕ ಎನಿಸಿದೆ. ಆದರೆ ರಾಷ್ಟ್ರೀಯ ಕ್ರೀಡಾಕೂಟದ ಲಿತಾಂಶವನ್ನು ವಿಶ್ವದಾಖಲೆಗೆ ಪರಿಗಣಿಸಲಾಗುವುದಿಲ್ಲ. 594 ಅಂಕಗಳ ಹಿಂದಿನ ರಾಷ್ಟ್ರೀಯ ದಾಖಲೆ ಹೊಂದಿದ್ದ ಸ್ವ್‌ಟಿ ಕೌರ್ 592 ಪಾಯಿಂಟ್‌ನೊಂದಿಗೆ 2ನೇ ಸ್ಥಾನಿಯಾಗಿ ಪದಕ ಸುತ್ತಿಗೇರಿದರು.