18 ಕೋಟಿ ರೂ.ಗೆ ಪಂಜಾಬ್​ ಕಿಂಗ್ಸ್​ ಸೇರಿದ ಅರ್ಷ್​ದೀಪ್​ ಸಿಂಗ್! Punjab Kings

ವಿಜಯವಾಣಿ - 2024-11-24T160411.965
Published on

ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ವೇಗಿ ಅರ್ಷ್​ದೀಪ್ ಸಿಂಗ್​ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್​ ಪಾಲಾಗಿದ್ದಾರೆ. ಭರ್ಜರಿ ಬಿಡ್ಡಿಂಗ್​ನಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ (Punjab Kings)​ ತಮ್ಮ ತಂಡಕ್ಕೆ ಅರ್ಷ್​ದೀಪ್​ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಹತ್ತು ತಂಡಗಳ ಮಾಲೀಕರು ಭಾಗಿಯಾಗಿದ್ದು, ತಮ್ಮ ಲೆಕ್ಕಾಚಾರಗಳ ಆಟವನ್ನು ವೇದಿಕೆಯಲ್ಲಿ ಪ್ರದರ್ಶಿಸುವಲ್ಲಿ ಸದ್ಯ ನಿರತರಾಗಿದ್ದಾರೆ. ಈ ಪೈಕಿ ಮೊದಲು ಅರ್ಷ್​ದೀಪ್ ಸಿಂಗ್ 18 ಕೋಟಿ ರೂ. ಪಂಜಾಬ್ ಕಿಂಗ್ಸ್​ ಪಾಲಾದರೆ, ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ 10.75 ಕೋಟಿ ರೂ.ಗೆ ಗುಜರಾತ್ ಟೈಟನ್ಸ್​ ಸೇರಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net