ಸಿಕೆ ನಾಯ್ಡು ಟ್ರೋಫಿಗೆ ಸಮಿತ್​ ದ್ರಾವಿಡ್​; ವಿನೂ ಮಂಕಡ್ ಟ್ರೋಫಿಗೆ ಅನ್ವಯ್​ ದ್ರಾವಿಡ್​ ಸಾರಥ್ಯ

web sravid sons
Published on

ಬೆಂಗಳೂರು: ಅಕ್ಟೋಬರ್​ 16ರಿಂದ ನಡೆಯಲಿರುವ 23 ವಯೋಮಿತಿಯ ಕರ್ನಲ್​ ಸಿಕೆ ನಾಯ್ಡು ಟ್ರೋಫಿ ಟೂರ್ನಿಯ ಮೊದಲ ಪಂದ್ಯಕ್ಕೂ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ದಿಗ್ಗಜ ರಾಹುಲ್​ ದ್ರಾವಿಡ್​ ಹಿರಿಯ ಪುತ್ರ ಸಮಿತ್​ ದ್ರಾವಿಡ್​ ಸ್ಥಾನ ಪಡೆದಿದ್ದಾರೆ. ಅನೀಶ್ವರ್​ ಗೌತಮ್​ ತಂಡದ ನಾಯಕರಾಗಿದ್ದಾರೆ.

ಕರ್ನಾಟಕ ತಂಡ: ಅನೀಶ್ವರ್​ ಗೌತಮ್​ (ನಾಯಕ), ಪ್ರಖರ್​ ಚತುರ್ವೇದಿ, ಕಾರ್ತಿಕ್​ ಎಸ್​ಯು, ಜಸ್ಪರ್​ ಇಜೆ, ಹರ್ಷಿಲ್​ ಧರ್ಮನಿ, ಕೆಪಿ ಕಾರ್ತಿಕೇಯ, ಸಮಿತ್​ ದ್ರಾವಿಡ್​, ಧ್ರುವ ಪ್ರಭಾಕರ್​, ಸಂಜಯ್​ ಅಶ್ವಿನ್​ (ವಿ.ಕೀ), ಹಾರ್ದಿಕ್​ ರಾಜ್​, ಯಶೋವರ್ಧನ್​ ಪರಂತಾಪ್​, ಶಶಿಕುಮಾರ್​ ಕೆ, ಮೋನಿಷ್​ ರೆಡ್ಡಿ, ಧನುಷ್​ ಗೌಡ, ಫೈಜನ್​ ಖಾನ್​ (ವಿ.ಕೀ). ಕೋಚ್​: ಸೋಮಶೇಖರ್​ ಶಿರಗುಪ್ಪಿ.

ಅನ್ವಯ್​ಗೆ ರಾಜ್ಯ ತಂಡದ ಸಾರಥ್ಯ: ಅಕ್ಟೋಬರ್​ 9ರಿಂದ ನಡೆಯಲಿರುವ ವಿನೂ ಮಂಕಡ್​ ಟ್ರೋಫಿಯಲ್ಲಿ ದ್ರಾವಿಡ್​ ಕಿರಿಯ ಪುತ್ರ ಅನ್ವಯ್​ ದ್ರಾವಿಡ್​ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಜತೆಗೆ ಅವರು ತಂಡದ ವಿಕೆಟ್​ ಕೀಪರ್ ಕೂಡ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net