

ಅಡಿಲೇಡ್: ಭಾರತ ತಂಡದ ಅಡಿಲೇಡ್ ಓವೆಲ್ ಮೈದಾನದಲ್ಲಿ ತನ್ನ 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸೋಲಿಗೆ ಶರಣಾಯಿತು. ಮಾಜಿ ಕ್ರಿಕೆಟಿಗರರು ಟೀಮ್ ಇಂಡಿಯಾದ ಕೆಟ್ಟ ನಿರ್ವಹಣೆಯನ್ನು ಟ್ರೋಲ್ ಮಾಡುತ್ತಿದ್ದರೆ, ಕೆಲ ಮಂದಿ ಭಾರತದ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕಾರಣ ಎಂದು ಟ್ರೋಲ್ ಮಾಡುತ್ತಿದ್ದಾರೆ. ವಿರಾಟ್ ನೀರಸ ನಿರ್ವಹಣೆಗೆ ಅನುಷ್ಕಾ ಶರ್ಮ ಅವರೇ ಕಾರಣ ಎಂದು ಬಗೆ ಬಗೆಯ ಟ್ವೀಟ್ ಮಾಡಲಾಗಿದೆ. ಕೊಹ್ಲಿ ಅನುಷ್ಕಾ ಶರ್ಮ ಗುಂಗಿನಲ್ಲೇ ಇರುವಂತೆ ಕಾಣುತ್ತಿದೆ. ಭಾರತಕ್ಕೆ ಬೇಗ ಆಗಮಿಸುವ ತವಕದಲ್ಲಿ ಕೊಹ್ಲಿ ಎರಡೂವರೆ ದಿನಕ್ಕೆ ಪಂದ್ಯ ಸೋತಿದ್ದಾರೆ ಎಂದೆಲ್ಲಾ ಟ್ವೀಟ್ ಮಾಡಲಾಗಿದೆ...
ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಬಳಗ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಹರ್ನಿಶಿ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 8 ವಿಕೆಟ್‌ಗಳಿಂದ ಶರಣಾಯಿತು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸುವ ಮೂಲಕ ಪಂದ್ಯದಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ ತಂಡ ಕೇವಲ ಎರಡೂವರೆ ದಿನಕ್ಕೆ ಸೋಲಪ್ಪಿಕೊಂಡಿತು. 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ಕುಖ್ಯಾತಿಗೆ ಒಳಗಾಯಿತು.