ಅನುಷ್ಕಾ ಶರ್ಮ ಮಾದಕ ಪೋಸ್​ಗೆ ವಿರಾಟ್ ಕೊಹ್ಲಿ ಏನಂತಾರೆ?

anu-kohli
Published on

ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮ ಇತ್ತೀಚೆಗೆ ಮ್ಯಾಗಝಿನ್ ಒಂದಕ್ಕಾಗಿ ಮಾದಕ ಭಂಗಿಯ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದರು ಮತ್ತು ಈ ಫೋಟೋಗಳನ್ನು ತಾವೇ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವರ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತೇ?

ಬೀಚ್‌ನಲ್ಲಿ ಅನುಷ್ಕಾ ಮಾದಕ ಭಂಗಿಯ ಪೋಸ್‌ಗಳನ್ನು ನೀಡಿರುವುದಕ್ಕೆ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನುಷ್ಕಾರ 2 ಚಿತ್ರಗಳಿಗೆ ಕಮೆಂಟ್ ಹಾಕಿರುವ ಕೊಹ್ಲಿ, ಇಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ಚಿತ್ರಕ್ಕೆ ಕಮೆಂಟ್ ವಿಭಾಗದಲ್ಲಿ ಹೃದಯ ಮತ್ತು ಬೆಂಕಿಯ ಇಮೋಜಿಗಳನ್ನು ಹಾಕಿದ್ದಾರೆ. ಈ ಮೂಲಕ ಹಾಟ್ ಆಗಿ ಕಾಣಿಸುತ್ತಿದ್ದೀಯಾ ಎಂದು ಮೆಚ್ಚಿದ್ದಾರೆ. ಬಾಲಿವುಡ್ ನಟಿಯರಾದ ಭೂಮಿ ಪಡ್ನೇಕರ್ ಮತ್ತು ಮೌನಿ ರಾಯ್ ಕೂಡ ಬೆಂಕಿಯ ಇಮೋಜಿಗಳನ್ನು ಹಾಕಿದ್ದಾರೆ. ಮತ್ತೊಂದು ಚಿತ್ರಕ್ಕೂ ಕೊಹ್ಲಿ ಕೆಲವು ಹೃದಯದ ಇಮೋಜಿಗಳನ್ನು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net