

ಮೊಹಾಲಿ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಪಂಜಾಬ್ ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ದೇಶೀಯ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯುನ್ ಎನಿಸಿದೆ. ಸೋಮವಾರ ನಡೆದ ೈನಲ್ ಪಂದ್ಯದಲ್ಲಿ ಬ್ಯಾಟರ್ ಅನ್ಮೋಲ್ ಪ್ರೀತ್ ಸಿಂಗ್ (113 ರನ್, 61 ಎಸೆತ, 10 ಬೌಂಡರಿ, 6 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಪಂಜಾಬ್ ತಂಡ 20 ರನ್‌ಗಳಿಂದ ಬರೋಡ ಎದುರು ಗೆದ್ದು ಬೀಗಿದೆ. ಇದಕ್ಕೂ ಮುನ್ನ 2006, 2011, 2012 ಹಾಗೂ 2014ರಲ್ಲಿ ಪಂಜಾಬ್ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಪಂಜಾಬ್, ಅನ್ಮೋಲ್ ಪ್ರೀತ್ ಸಿಂಗ್ ಹಾಗೂ ನೇಹಾಲ್ ವಧೇರಾ (61* ರನ್, 27 ಎಸೆತ, 6 ಬೌಂಡರಿ,4 ಸಿಕ್ಸರ್) ಜತೆಯಾಟದ ನೆರವಿನಿಂದ 4 ವಿಕೆಟ್‌ಗೆ 223 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಅಭಿಮನ್ಯು ಸಿಂಗ್ (61 ) ಅರ್ಧಶತಕದ ಪ್ರತಿರೋಧದ ನಡುವೆಯೂ, ಸ್ಲಾಗ್ ಓವರ್‌ಗಳಲ್ಲಿ ವೇಗಿ ಆರ್ಷದೀಪ್ ಸಿಂಗ್ (23ಕ್ಕೆ4) ಬಿಗಿ ದಾಳಿಯ ಎದುರು ಮಂಕಾದ ಬರೋಡ, 7 ವಿಕೆಟ್‌ಗೆ 203 ರನ್‌ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್: 4 ವಿಕೆಟ್‌ಗೆ 223 (ಅಭಿಷೇಕ್ 0, ಪ್ರಭ್‌ಸಿಮ್ರಾನ್ 9, ಅನ್ಮೋಲ್‌ಪ್ರೀತ್ 113, ಮಂದೀಪ್ 32, ನೇಹಾಲ್ 61*, ಕೃನಾಲ್ 30ಕ್ಕೆ1).
ಬರೋಡ: 7 ವಿಕೆಟ್‌ಗೆ 203 (ಅಭಿಮನ್ಯು 61, ಕೃನಾಲ್ ಪಾಂಡ್ಯ 45, ವಿಷ್ಣು 28, ಆರ್ಷದೀಪ್ 23ಕ್ಕೆ4, ಹರ್‌ಪ್ರೀತ್ 35ಕ್ಕೆ1).