

ಬೆಂಗಳೂರು: ಆಂಡ್ರೆ ರಸೆಲ್, ವಿಶ್ವ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತ ಹೆಸರು. ಚುಟುಕು ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಸೆಲ್, ಐಪಿಎಲ್‌ನಲ್ಲಿ ಕೋಲ್ಕತ ನೈಟ್ ರೈಡರ್ಸ್‌ನ ಪ್ರಮುಖ ಆಲ್ರೌಂಡರ್ ಕೂಡ ಹೌದು. ಕರೊನಾ ವೈರಸ್ ಭೀತಿಯಿಂದಾಗಿ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ರಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಪ್ರಸಿದ್ಧಿ ಪಡೆದಿದ್ದಾರೆ ರಸೆಲ್ ಪತ್ನಿ ಜೈಸಮ್ ಲೊರಾ. ಇನ್‌ಸ್ಟಾಗ್ರಾಂನಲ್ಲಿ ಬಿಕಿನಿ ತೊಟ್ಟು, ಹಾಟ್ ಪೋಸ್ ನೀಡುತ್ತಾರೆ. ತಮ್ಮ ಇನ್‌ಸ್ಟಾ ಖಾತೆಯಲ್ಲಿ 3.50 ಲಕ್ಷ ಹಿಂಬಾಲಕರನ್ನು ಹೊಂದಿರುವ ಲೊರಾ ಇದೀಗ ಅವರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕರೊನಾ ವೈರಸ್ನಿಂದ ಶಾಹಿದ್ ಅಫ್ರಿದಿ ಕುಟುಂಬ ಮುಕ್ತ
2016ರಲ್ಲಿ ಮದುವೆಯಾದ ರಸೆಲ್-ಲೊರಾ ದಂಪತಿಗೆ ಕಳೆದ ವರ್ಷ ಅಮೈಯಾ ಎಸ್ ರಸೆಲ್ ಜನಿಸಿದಳು. ವಿಶ್ವದ ಪ್ರಸಿದ್ಧ ಮಾಡೆಲ್‌ಗಳಲ್ಲಿ ಲೊರಾ ಕೂಡ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಮಿಂಚುವ ಲೊರಾ, ಪಂದ್ಯಗಳ ವೇಳೆ ಗಂಡನನ್ನು ಹುರಿದುಂಬಿಸಲು ಸ್ಟೇಡಿಯಂಗೆ ಕೆಕೆಆರ್ ಜೆರ್ಸಿ ತೊಟ್ಟು ಆಗಮಿಸುತ್ತಾರೆ.