

ವಿಜಯವಾಡ: ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಐಪಿಎಲ್ ಪಂದ್ಯಗಳ ಉಚಿತ ಟಿಕೆಟ್ಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಬೆದರಿಕೆ ಒಡ್ಡಿದ್ದ ವಿವಾದ ಸದ್ಯ ತಣ್ಣಗಾಗಿರುವ ನಡುವೆ, ಆಂಧ್ರ ಕ್ರಿಕೆಟ್ ಸಂಸ್ಥೆ (ಎಸಿಎ) ವಿಶಾಖಪಟ್ಟಣವನ್ನು ತವರು ಮೈದಾನವಾಗಿಸುವ ಆಫರ್ ಮುಂದಿಟ್ಟಿದೆ.
ಐಪಿಎಲ್ ಟೂರ್ನಿಯಲ್ಲಿ ಸನ್ರೈಸರ್ಸ್ ತಂಡ ತನ್ನ ಉಳಿದ ತವರು ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡುವಂತೆ ಎಸಿಎ ಆಹ್ವಾನ ನೀಡಿದೆ. ಜತೆಗೆ ಸನ್ರೈಸರ್ಸ್ ಫ್ರಾಂಚೈಸಿಗೆ ತೆರಿಗೆ ವಿನಾಯಿತಿ ನೀಡುವ ಆರ್ನ ಆಸೆಯನ್ನೂ ತೋರಿಸಿದೆ.
ಆದರೆ ಸನ್ರೈಸರ್ಸ್ ಫ್ರಾಂಚೈಸಿ ಈಗಾಗಲೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಜತೆಗೆ ರಾಜಿ ಸಂಧಾನ ಮಾಡಿಕೊಂಡಿರುವುದರಿಂದ ಹಾಲಿ ಆವೃತ್ತಿಯಲ್ಲಿ ತಾಣ ಬದಲಾವಣೆ ಅನುಮಾನವೆನಿಸಿದೆ.