ಅನಹಿತಾ ಸಿಂಗ್ ಶತಕ, ಹಿಮಾಚಲಕ್ಕೆ ಜಯ

anahita singh
ಶಿವಮೊಗ್ಗದ ಕೆಎಸ್‌ಸಿಎ ಮೈದಾನದಲ್ಲಿ ಮಣಿಪುರ ವಿರುದ್ಧ ಹಿಮಾಚಲ ಪ್ರದೇಶದ ಆರಂಭಿಕ ಆಟಗಾರ್ತಿ ಅನಹಿತಾ ಸಿಂಗ್ ಅಜೇಯ ಶತಕ ಬಾರಿಸಿ ಸಂಭ್ರಮಿಸಿದರು.
Published on

ಶಿವಮೊಗ್ಗ: ಆರಂಭಿಕ ಆಟಗಾರ್ತಿ ಅನಹಿತಾ ಸಿಂಗ್ ಅವರ ಅಜೇಯ ಶತಕ(136) ಹಾಗೂ ರೈಷಾ (11ಕ್ಕೆ 6) ಮಾರಕ ಬೌಲಿಂಗ್ ನೆರವಿನಿಂದ ಹಿಮಾಚಲ ಪ್ರದೇಶ ತಂಡ 224 ರನ್‌ಗಳ ಅಂತರದಿಂದ ಮಣಿಪುರ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ನಗರದ ನವುಲೆ ಕೆಎಸ್‌ಸಿಎ ಮೈದಾನ-1ರಲ್ಲಿ ಶನಿವಾರ ನಡೆದ 15 ವರ್ಷದೊಳಗಿನ ಬಾಲಕಿಯರ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಿಮಾಚಲ ಪ್ರದೇಶ ತಂಡ 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 272 ರನ್ ಪೇರಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಅನಹಿತಾ ಸಿಂಗ್ ಮಣಿಪುರದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 108 ಎಸೆತಗಳಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 136 ರನ್ ಗಳಿಸಿ ಅಜೇಯರಾಗುಳಿದರು. ಅವರಿಗೆ ಸೈನಾ ಚೌಹಾನ್(39), ನಾಯಕಿ ಧನ್ಯಲಕ್ಷ್ಮೀ(34) ಮತ್ತು ಅಕ್ಷರ ಮಹಿನಿಯಾ (ಅಜೇಯ 31) ಉತ್ತಮ ಸಾಥ್ ನೀಡಿದರು. ದೊಡ್ಡ ಮೊತ್ತ ಬೆನ್ನಟ್ಟಿದ ಮಣಿಪುರ ತಂಡ ರೈಷಾ ಅವರ ಕರಾರುವಕ್ ದಾಳಿಗೆ ನಲುಗಿ ಕೇವಲ 49 ರನ್‌ಗಳಿಗೆ ಆಲೌಟ್ ಆಯಿತು. ಮಣಿಪುರದ 7 ಆಟಗಾರ್ತಿಯರು ಶೂನ್ಯ ಸುತ್ತಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net