

ಮುಲ್ಲನ್ಪುರ: ಆರಂಭಿಕ ಪಂದ್ಯದ ಬಳಿಕ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಟೂರ್ನಿಯಲ್ಲಿ ದಾಖಲೆಯ ಮೊತ್ತ ಕಲೆಹಾಕಿರುವ ಸನರೈಸರ್ಸ್ ತಂಡ ಮಂಗಳವಾರ ಐಪಿಎಲ್&17ನೇ ಆವೃತ್ತಿಯಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಮತ್ತೊಂದು ಜಯದ ನಿರೀೆಯಲ್ಲಿವೆ.
ಎರಡೂ ತಂಡಗಳು ಆಡಿರುವ 4 ಪಂದ್ಯಗಳಲ್ಲಿ 2 ಸೋಲು, 2 ಜಯದೊಂದಿಗೆ 4 ಅಂಕ ಕಲೆಹಾಕಿವೆ. ಉತ್ತಮ ರನರೇಟ್ ಸರಾಸರಿಯಲ್ಲಿ ಸನರೈಸರ್ಸ್ ಹೈದರಾಬಾದ್ ಮೇಲುಗೈ ಸಾಧಿಸಿದೆ.
ಪಂಜಾಬ್ ಕಿಂಗ್ಸ್ ಮುಲ್ಲನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣವನ್ನು ನೂತನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡು ಲಕ್ ಬದಲಾಗುವ ನಿರೀಕ್ಷಯಲ್ಲಿದೆ. ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಕಂಡ ಬಳಿಕ ಆಟಗಾರರ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆ ತಂದಿದೆ. ಆದರೆ ಹಿಂದಿನ ಪಂದ್ಯದಲ್ಲಿ ಗುಜರಾತ್ ಎದುರು 200 ರನ್ ಚೇಸಿಂಗ್ನಲ್ಲಿ ರೋಚಕ ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇತ್ತ ಸನ್ರೈಸರ್ಸ್, ಹಾಲಿ ಚಾಂಪಿಯನ್ ಸಿಎಸ್ಕೆ ತಂಡವನ್ನು ಮಣಿಸಿ ಗೆಲುವಿಮ ಹಳಿಗೆ ಮರಳಿದೆ. ತವರಿನ ಅಂಗಣದಲ್ಲಿ ಪಂಜಾಬ್ ೇವರಿಟ್ ಎನಿಸಿದರೂ, ಪಂದ್ಯ ಕುತೂಹಲ ಮೂಡಿಸಿದೆ.
ಯುವ ಆಟಗಾರರ ಬಲ : ಪಂಜಾಬ್ ಕಿಂಗ್ಸ್ನಲ್ಲಿ ಬಿಗ್ ಹಿಟ್ಟರ್ಗಳ ಕೊರತೆಯಿಲ್ಲ. ಆದರೆ ಆಟಗಾರರ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆ ಎನಿಸಿದೆ. ಶಿಖರ್ ಧವನ್ ಅವರಿಂದ ಇದುವರೆಗೆ ನಿರೀತ ರನ್ ಬಂದಿಲ್ಲ. ಇಂಗ್ಲೆಂಡ್ನ ಬ್ಯಾಟರ್ ಜಾನಿ ಬೇರ್ ಸ್ಟೋ ಟೂರ್ನಿಯಲ್ಲಿ ರನ್ಬರ ಎದುರಿಸಿದ್ದಾರೆ. ಯುವ ಆಟಗಾರರಿಂದ ಕೂಡಿರುವ ಮಧ್ಯಮ ಕ್ರಮಾಂಕ ಪಂಜಾಬ್ ಹಿಂದಿನ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಭ್ ಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್ ಜಿತೇಶ್ ಶರ್ಮ ಉತ್ತಕ ಕೊಡುಗೆ ನೀಡಿದ್ದಾರೆ. ವಿದೇಶೀ ಆಟಗಾರರಿಂದ ನಿರೀತ ಪ್ರದರ್ಶನ ಮೂಡಿಬಂದಿಲ್ಲ. ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರನ್ ಸ್ಥಿರ ಪ್ರದರ್ಶನ ನೀಡಬೇಕಿದೆ.
ಕಗಿಸೋ ರಬಾಡ್ ಪಂಜಾಬ್ನ ಯಶಸ್ವಿ ಬೌಲರ್ ಎನಿಸಿದ್ದಾರೆ. ಅರ್ಷದೀಪ್ ಸಿಂಗ್. ಹರ್ಷಲ್ ಪಟೇಲ್ ಸ್ಲಾಗ್ ಓವರ್ಗಳಲ್ಲಿ ದುಬಾರಿಯಾಗಿರುವ ಮುಳುವಾಗಿ ಪರಿಣಮಿಸಿದೆ.
ಆತ್ಮವಿಶ್ವಾಸದಲ್ಲಿ ಕಮ್ಮಿನ್ಸ್ ಪಡೆ: ಸ್ಫೋಟಕ ಬ್ಯಾಟರ್ಗಳಿಂದ ಕೂಡಿರುವ ಸನ್ರೈಸರ್ಸ್ ಹೈದರಾಬಾದ್ ಸದೃಢ ಬ್ಯಾಟಿಂಗ್ ವಿಭಾಗ ಹೊಂದಿದೆ. ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್, ಏಡನ್ ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ ಭರ್ಜರಿ ಾಮ್ರ್ನಲ್ಲಿದ್ದಾರೆ. ಜತೆಗೆ ಅನುಭವಿ ಆಟಗಾರರ ಬಲವಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಆಡಿರುವ 4 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಇವರಿಗೆ ಟಿ. ನಟರಾಜನ್ ಸಾಥ್ ನೀಡಿದ್ದಾರೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ದುಬಾರಿ ಎನಿಸಿದ್ದಾರೆ. ಆದರೆ ಹಿಂದಿನ ಐದು ಮುಖಾಮುಖಿಯಲ್ಲಿ 3&2 ಸನ್ರೈಸರ್ಸ್ ಮೇಲುಗೈ ಸಾಧಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ.
ಮುಖಾಮುಖಿ: 21
ಪಂಜಾಬ್: 7
ಸನ್ರೈಸರ್ಸ್: 14
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.