

ಚೆನ್ನೈ: ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿರುವ ಐದು ಬಾರಿ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-17ರ ತನ್ನ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೆಣಸಾಡಲಿದೆ. ಚೆಪಾಕ್‌ನಲ್ಲಿ ಜಯದ ಹಾದಿಗೆ ಮರಳಿರುವ ಋತುರಾಜ್ ಗಾಯಕ್ವಾಡ್ ಬಳಗ ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಕಳೆದ ಪಂದ್ಯದಲ್ಲಿ ದಾಖಲೆಯ ಚೇಸಿಂಗ್ ನಡೆಸಿರುವ ಪಂಜಾಬ್ ಮತ್ತೊಂದು ಅಚ್ಚರಿಯ ಲಿತಾಂಶದ ತವಕದಲ್ಲಿದೆ.
ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸಿಎಸ್‌ಕೆ ಪರ ಮಥೀಶ ಪಥಿರಣ, ತುಷಾರ್ ದೇಶಪಾಂಡೆ ಹೊರಗುಳಿಯಲಿದ್ದು, ಶಾರ್ದೂಲ್ ಠಾಕೂರ್, ರಿಚರ್ಡ್ ಗ್ಲೀಸನ್ ಕಣಕ್ಕಿಳಿಯಲಿದ್ದಾರೆ.
ಸನ್‌ರೈಸರ್ಸ್ ಹೈದರಬಾದ್ ತಂಡವನ್ನು ಹಾಲಿ ಟೂರ್ನಿಯಲ್ಲಿ ಆಲೌಟ್ ಮಾಡಿದ ಮೊದಲ ತಂಡ ಎನಿಸಿರುವ ಸಿಎಸ್‌ಕೆ , ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಉಳಿದಿರುವ 5 ಪಂದ್ಯಗಳ ಪೈಕಿ 3ರಲ್ಲಿ ಗೆಲುವು ದಾಖಲಿಸಿ ಪ್ಲೇ ಆ್ಗೇರುವತ್ತ ಸಿಎಸ್‌ಕೆ ಗಮನಹರಿಸಿದೆ. ಇತ್ತ ಕೆಕೆಆರ್ ವಿರುದ್ಧ 262 ರನ್‌ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿರುವ ಪಂಜಾಬ್ ಕಿಂಗ್ಸ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 6 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಪ್ಲೇಆ್ಗೇರಲು ಉಳಿದಿರುವ ಎಲ್ಲ ಪಂದ್ಯಗಳಲ್ಲಿ ಪಂಜಾಬ್‌ಗೆ ಜಯ ಅನಿವಾರ‌್ಯ. ಆದರೆ ಚೆಪಾಕ್ ಬೌಲರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಪಂಜಾಬ್, ಸಿಎಸ್‌ಕೆ ಎದುರು ಕಠಿಣ ಪರೀಕ್ಷೆ ಎದುರಿಸಲಿದೆ. ಪಂಜಾಬ್ ತಂಡ ರಾಹುಲ್ ಚಹರ್, ಹರ್‌ಪ್ರೀತ್ ಬ್ರಾರ್ ಅವರಿಂದ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಭರ್ಜರಿ ಾರ್ಮ್‌ನಲ್ಲಿ ಗಾಯಕ್ವಾಡ್: ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿರುವ ಸಿಎಸ್‌ಕೆಗೆ ನಾಯಕ ಋತುರಾಜ್ ಗಾಯಕ್ವಾಡ್ ಪ್ರಮುಖ ಶಕ್ತಿಯಾಗಿ ನಿಂತಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ 108*,98 ರನ್‌ಗಳಿಸಿ ಹಾಲಿ ಟೂರ್ನಿಯಲ್ಲಿ ಭರ್ಜರಿ ಾರ್ಮ್‌ನಲ್ಲಿದ್ದಾರೆ. ಆದರೆ ಅನುಭವಿ ಅಜಿಂಕ್ಯ ರಹಾನೆ ಹಿಂದಿನ 4 ಪಂದ್ಯಗಳಲ್ಲಿ 5,36,1,9 ರನ್‌ಗಳಿಸಿರುವುದು ಕೊಂಚ ಹಿನ್ನಡೆ ತಂದಿದೆ. ಡೆರಿಲ್ ಮಿಚೆಲ್ ಸನ್‌ರೈಸರ್ಸ್ ಎದುರು ಅರ್ಧಶತಕ ಸಿಡಿಸಿ ಲಯಕ್ಕೆ ಮರಳಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ತಂಡಕ್ಕೆ ಆಧಾರವಾಗಿದ್ದಾರೆ. ಇದುವರೆಗೆ 350 ರನ್ ಕಲೆಹಾಕಿರುವ ದುಬೆ, ಸ್ಪಿನ್ನರ್‌ಗಳ ಎದುರು ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಇಬ್ಬನಿಯ ನಡುವೆಯೂ 200 ರನ್ ರಕ್ಷಿಸಿಕೊಂಡಿರುವ ಸಿಎಸ್‌ಕೆ ಬೌಲರ್‌ಗಳು ಈ ಬಾರಿಯೂ ಅದೇ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ. ಮಥೀಶ ಪಥಿರಣ ಪ್ರಮುಖ ಅಸ ಎನಿಸಿದರೆ, ಇವರಿಗೆ ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್ ಸಾಥ್ ನೀಡಿದ್ದಾರೆ. ಸರ್ವಾಂಗೀಣ ನಿರ್ವಹಣೆಯೊಂದಿಗೆ ಮತ್ತೊಂದು ಜಯದ ನಿರೀಕ್ಷೆಯಲ್ಲಿ ಸಿಎಸ್‌ಕೆ ಕಣಕ್ಕಿಳಿಯಲಿದೆ.
ಮುಖಾಮುಖಿ: 28
ಸಿಎಸ್‌ಕೆ: 15
ಪಂಜಾಬ್: 13
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ