ಧನಶ್ರೀ ಜತೆ ವಿಚ್ಛೇದನ: ಶ್ರೇಯಸ್ ಅಯ್ಯರ್ ಜತೆ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ಚಹಾಲ್! Chahal To Appear On Big Boss 18 With Shreyas Iyer

_Yuzvendra Chahal To Appear On Big Boss 18 With Shreyas Iyer
Published on

(Chahal To Appear On Big Boss 18 With Shreyas Iyer)  :  ಭಾರತೀಯ ಕ್ರಿಕೆಟಿಗ ಯಜ್ವೇಂದ್ರ ಚಹಾಲ್ ಮತ್ತು ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ ಈ ಸುದ್ದಿ ಬೆನ್ನಲ್ಲೇ ಯುಜುವೇಂದ್ರ ಚಹಾಲ್ ಮತ್ತೊಬ್ಬ ಕ್ರಿಕೆಟಿಗನೊಂದಿಗೆ ಬಿಗ್ ಬಾಸ್ ಪ್ರವೇಶಿಸಲಿದ್ದಾರೆ ಎಂಬ ವರದಿಗಳಿವೆ.

ಯುಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ತಮ್ಮ Instagram ಖಾತೆಗಳಿಂದ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಇಬ್ಬರು ಬೇರೆ ಆಗುತ್ತಿದ್ದಾರೆ ಎಂದು ಚರ್ಚೆ ಶುರುವಾಗಿದೆ ಆದರೆ ಈ ಕುರಿತಾಗಿ ಇಬ್ಬರೂ ಕೂಡಾ ಎಲ್ಲೂ ಮಾತನಾಡಿಲ್ಲ. ವಿಚ್ಛೇದನದ ಸುದ್ದಿಯ ನಡುವೆ, ಜನಪ್ರಿಯ ಕಾರ್ಯಕ್ರಮವಾದ ಬಿಗ್ ಬಾಸ್‌ನ 18 ನೇ ಸೀಸನ್‌ನಲ್ಲಿ ಯುಜುವೇಂದ್ರ ಚಹಾಲ್ ಮತ್ತು ಶ್ರೇಯಸ್ ಅಯ್ಯರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಮುಖ ಸುದ್ದಿ ಹೊರಬಿದ್ದಿದೆ.

ಖಾಸಗಿವಾಹಿನಿಯೊಂದರ ವರದಿಯ ಪ್ರಕಾರ, ರವೀನಾ ಟಂಡನ್, ಅವರ ಮಗಳು ರಾಶಾ ಮತ್ತು ಅಮನ್ ದೇವಗನ್ ಅವರು ತಮ್ಮ ಮುಂಬರುವ ಚಿತ್ರ 'ಆಜಾದ್' ಅನ್ನು ಪ್ರಚಾರ ಮಾಡಲು ಬಿಗ್ ಬಾಸ್ ಲೈವ್‌ನ ಶನಿವಾರದ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಾಲ್ ಮತ್ತು ಶಶಾಂಕ್ ಸಿಂಗ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಚಹಾಲ್ ತನ್ನ ಸ್ನೇಹಿತ ಶ್ರೇಯಸ್ ಅಯ್ಯರ್ ಜತೆ ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಬರುತ್ತಿದೆ.  ವೀಕೆಂಡ್  ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಚಹಾಲ್ ಕಾರ್ಯಕ್ರಮಕ್ಕೆ ಏಕೆ ಬರುತ್ತಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಚಹಾಲ್ ವಿಚ್ಚೇದನದ ವದಂತಿಗಳ ಬಗ್ಗೆ ಏನು ಮಾತನಾಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಈ ಸುದ್ದಿಯ ನಂತರ ಯುಜುವೇಂದ್ರ ಚಹಾಲ್ ಬಿಗ್ ಬಾಸ್ ಗೆ ಹೋದರೆ ಧನಶ್ರೀ ವರ್ಮಾ ನಡುವೆ ಬರುತ್ತಿರುವ ಸುದ್ದಿಗೆ ಸ್ಪಷ್ಟನೆ ನೀಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಜೀವನವನ್ನು ಅಭಿಮಾನಿಗಳು ತಿಳಿದುಕೊಳ್ಳಲು ಬಯಸುತ್ತಾರೆ. ಭಾನುವಾರದಂದು ಪ್ರಸಾರವಾಗುವ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net