

ನವದೆಹಲಿ: ಅಮೆರಿಕದ ಎಡಗೈ ವೇಗಿ ತಾರಾ ನೋರಿಸ್ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ಗೆ (ಡಬ್ಲ್ಯುಪಿಎಲ್) ಯುಪಿ ವಾರಿಯರ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. 28 ವರ್ಷದ ನೋರಿಸ್ ಕಳೆದ ಆವೃತ್ತಿಗೆ ಮುನ್ನ 10 ಲಕ್ಷ ರೂ.ಗೆ ಯುಪಿ ತಂಡ ಸೇರಿದ್ದರು. ಇದೀಗ ಅದೇ ಮೊತ್ತಕ್ಕೆ ಅವರು ಮುಂಬೈ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.
ನೋರಿಸ್ ಡಬ್ಲ್ಯುಪಿಎಲ್ನಲ್ಲಿ ಆಡಿದ ಅಸೋಸಿಯೇಟ್ ದೇಶದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಮೊದಲ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅವರು, ಟೂರ್ನಿಯ ಇತಿಹಾಸದಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದ್ದರು. 2021ರಲ್ಲಿ ಅಮೆರಿಕ ಪರ ಪದಾರ್ಪಣೆ ಮಾಡಿದ್ದ ಅವರು 5 ಏಕದಿನ ಮತ್ತು 17 ಟಿ20 ಪಂದ್ಯ ಆಡಿದ್ದಾರೆ.
ಡಬ್ಲ್ಯುಪಿಎಲ್ 5ನೇ ಆವೃತ್ತಿ 2027ರ ಜನವರಿ 14ರಿಂದ ೆಬ್ರವರಿ 7ರವರೆಗೆ ನಡೆಯಲಿದೆ. ಅದಕ್ಕೆ ಮುನ್ನ ಅಕ್ಟೋಬರ್ 28ಕ್ಕೆ ಕೊಚ್ಚಿಯಲ್ಲಿ ಆಟಗಾರ್ತಿಯರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.