ಸಿಕ್ಕ ಅವಕಾಶವನ್ನು…; ಟೀಮ್​ ಇಂಡಿಯಾ ನೂತನ ಕೋಚ್​ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಬ್ರೆಟ್​ ಲೀ

Gambhir Lee
Published on

ನವದೆಹಲಿ: ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ ಟಿ20 ವಿಶ್ಚಕಪ್​ನಲ್ಲಿ ಭಾರತ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟಿ20 ವಿಶ್ವಕಪ್​ನಲ್ಲಿ ಭಾರತದ ವಿಜಯದ ನಂತರ ತಂಡಕ್ಕೆ ನೂತನ ಕೋಚ್​ ಆಗಿ ಗೌತಮ್​ ಗಂಭೀರ್​ರನ್ನು ನೇಮಿಸಲಾಗಿದ್ದು, ಅವರ ಮುಂದೆ ಬೆಟ್ಟದಷ್ಟು ಸವಾಲಿದೆ ಎಂದು ಹೇಳಬಹುದಾಗಿದೆ.

ಶ್ರೀಲಂಕಾ ವಿರುದ್ಧದ ಸರಣಿಯಿಂದ ಗೌತಮ್​ ಗಂಭೀರ್​ ಕೋಚ್​ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್​ ಟ್ರೋಫಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​, 2026ರಲ್ಲಿ ಟಿ20 ವಿಶ್ವಕಪ್​, 2027ರಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಏಕದಿನ ವಿಶ್ವಕಪ್​ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಇದೆಲ್ಲರದರ ನಡುವೆ ಭಾರತದ ನೂತನ ಕೋಚ್​ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್​ ಲೀ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಬೆಟ್​ ಲೀ, ನನ್ನ ಪ್ರಕಾರ ಆತ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಚೆನ್ನಗಿ ಬಳಸಿಕೊಂಡಿದ್ದಾನೆ. ಆತ ತಂಡವನ್ನು ಯಾವಾಗಲೂ ಒಟ್ಟಿಗೆ ಕರೆದುಕೊಂಡು ಹೋಗಲು ನೋಡುತ್ತಾನೆ. ಆತನಲ್ಲಿರುವ ಆಕ್ರಮಣಶೀಲತೆ ಮತ್ತು ಗೆಲುವಿನ ಮನೋಭಾವವು ತಂಡದ ಗೆಲುವಿಗೆ ಸಹಕಾರಿಯಾಗುತ್ತದೆ. ಇದು ಭಾರತ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

ನಾನು ಈ ಸಮಯದಲ್ಲಿ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಪ್​ ಗೆದ್ದಾಗ ಪ್ರತಿಯೊಬ್ಬ ಆಟಗಾರನ ಮುಖದಲ್ಲಿದ್ದ ಭಾವನೆಯೇ ಹೇಳುತ್ತಿತ್ತು. ಏಕದಿನ ವಿಶ್ವಕಪ್​ ಗೆದ್ದಾಗ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆಟಗಾರರು ಅದರ ಮೇಲೆ ಕಾಲುಗಳನ್ನು ಇಟ್ಟು ಫೋಟೋ ತೆಗೆಸಿಕೊಂಡರು. ಇದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಆದರೆ, ಭಾರತ ತಂಡದ ಆಟಗಾರರು ಕಪ್​ ಗೆದ್ದಾಗ ಸಂಭ್ರಮಿಸಿದ ರೀತಿ ನೋಡಲು ನನಗೆ ತುಂಬಾ ಖುಷಿಯಾಯಿತು ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಆಟಗಾರ ಬ್ರೆಟ್​ ಲೀ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net