ಭಾರತದ ವಿರುದ್ಧದ ಟಿ20 ಸರಣಿಯ ಮಧ್ಯದಲ್ಲಿಯೇ ತವರಿಗೆ ಹೊರಟ ವಿಶ್ವಕಪ್ ವಿಜೇತ ಆಸೀಸ್ ಕ್ರಿಕೆಟಿಗರು

New-Project-39
Published on

ಗುವಾಹಟಿ: ಭಾರತ ವಿರುದ್ಧ 3ನೇ ಟಿ20 ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ಆರು ಆಟಗಾರರು ತವರಿಗೆ ವಾಪಸ್ ಆಗಿದ್ದು, ಅಂತಿಮ 2 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ರಾಯ್‌ಪುರ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೊನೇ 2 ಪಂದ್ಯಗಳಿಗೆ ಪರಿಷ್ಕೃತ ತಂಡ ಪ್ರಕಟಿಸಲಾಗಿದೆ.

ಸತತ ಐದು ವಾರ ಏಕದಿನ ವಿಶ್ವಕಪ್ ಆಡಿ ಗೆದ್ದ ಬಳಿಕ ಟಿ20 ಸರಣಿಗೂ ಆಸೀಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟೀವನ್ ಸ್ಮಿತ್, ಆಡಂ ಜಂಪಾ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಸೀನ್ ಅಬೋಟ್‌ಗೆ ಮುಂಬರುವ ಪಾಕಿಸ್ತಾನ ವಿರುದ್ಧದ ತವರಿನ ಟೆಸ್ಟ್ ಸರಣಿಗೂ ಮುನ್ನ ವಿಶ್ರಾಂತಿ ಕಲ್ಪಿಸಲಾಗಿದೆ. ೈನಲ್ ಹೀರೋ ಟ್ರಾವಿಸ್ ಹೆಡ್ ಮಾತ್ರ ಉಳಿದ 2 ಪಂದ್ಯಗಳಿಗೂ ಲಭ್ಯವಾಗಲಿದ್ದಾರೆ.

ಪರಿಷ್ಕೃತ ಆಸೀಸ್ ಟಿ20 ತಂಡ: ಮ್ಯಾಥ್ಯೂ ವೇಡ್ (ನಾಯಕ), ಬೆಹ್ರನ್‌ಡಾರ್, ಟಿಮ್ ಡೇವಿಡ್, ಬೆನ್ ಡ್ವೇಶುಹಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮೊಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಥ್ಯೂ ಶಾರ್ಟ್, ಕೇನ್ ರಿಚರ್ಡ್‌ಸನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net