ಟಿ20 ವಿಶ್ವಕಪ್ ಆಸೀಸ್ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಿಲ್ಲ ಸ್ಥಾನ:ಮಿಚೆಲ್ ಮಾರ್ಷ್‌ಗೆ ಸಾರಥ್ಯ

New-Project-2-1
Published on

ಮೆಲ್ಬೋರ್ನ್: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ದೇಶಗಳ ಜಂಟಿ ಆತಿಥ್ಯದಲ್ಲಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಆಸ್ಟ್ರೇಲಿಯಾ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಆರನ್ ಫಿಂಚ್ ನಿವೃತ್ತಿ ಬಳಿಕ ಹಂಗಾಮಿ ನಾಯಕನಾಗಿದ್ದ ಮಿಚೆಲ್ ಮಾರ್ಷಗೆ ಈಗ ಪೂರ್ಣಪ್ರಮಾಣದಲ್ಲಿ ಸಾರಥ್ಯ ವಹಿಸಲಾಗಿದೆ. 2007ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ವಿಶೇಷ ವಿಡಿಯೋ ಮೂಲಕ ವಿಶ್ವಕಪ್‌ಗೆ ತೆರಳಲಿರುವ ಆಸೀಸ್ ಆಟಗಾರರ ಹೆಸರನ್ನು ಬಹಿರಂಗಗೊಳಿಸಿದರು.

ಮಾಜಿ ನಾಯಕ, ಅನುಭವಿ ಬ್ಯಾಟರ್ ಸ್ಟೀವನ್ ಸ್ಮಿತ್ ಅವರನ್ನು 2014ರ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಆಸ್ಟ್ರೇಲಿಯಾ ತಂಡದಿಂದ ಕೈ ಬಿಡಲಾಗಿದೆ. ಐಪಿಎಲ್‌ನಲ್ಲಿ ಯಾವುದೇ ತಂಡ ಖರೀದಿಗೆ ಆಸಕ್ತಿ ತೋರದಿರುವುದು ಸ್ಮಿತ್ ಅವರನ್ನು ಹೊರಗಿಡಲು ಕಾರಣ ಎನಿಸಿದೆ. 2022ರಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ಸ್ಪಿನ್ನರ್ ಆಶ್ಟನ್ ಅಗರ್, ಆಸ್ಟ್ರೇಲಿಯಾದ ತಂಡದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿರದ ಮಾರ್ಕಸ್ ಸ್ಟೋಯಿನಿಸ್ ಸ್ಥಾನ ಪಡೆಯುವಲ್ಲಿ ಸಲರಾಗಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿನ ಬ್ಯಾಟಿಂಗ್ ನಡೆಸುತ್ತಿರುವ 22 ವರ್ಷದ ಜೇಕ್ ್ರೇಸರ್ ಮೆಕ್‌ಗುರ್ಕ್ ಅನುಭವದ ಕೊರತೆಯಿಂದಾಗಿ ಹೊರಗುಳಿದಿದ್ದಾರೆ. ಟೆಸ್ಟ್, ಏಕದಿನ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಟಿ20 ತಂಡದಲ್ಲಿ ಪ್ರಮುಖ ವೇಗಿಯಾಗಿ ಸ್ಥಾನ ಪಡೆದಿದ್ದಾರೆ. ಜೂನ್ 6ರಂದು ಓಮನ್ ವಿರುದ್ಧ ಆಸೀಸ್ ತನ್ನ ಮೊದಲ ಪಂದ್ಯ ಆಡಲಿದೆ.

ತಂಡ: ಮಿಚೆಲ್ ಮಾರ್ಷ್ (ನಾಯಕ), ಆಶ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net