ಅಕ್ಷಯ್​ ಕಾಮತ್​ ದ್ವಿಶತಕ; 50 ಓವರ್​ಗಳಲ್ಲಿ 556 ರನ್​ ಸಿಡಿಸಿದ ಮರ್ಚೆಂಟ್ಸ್​ ಕ್ರಿಕೆಟ್​ ಕ್ಲಬ್!

web akshay
Published on

ಬೆಂಗಳೂರು: ಯುವ ಬ್ಯಾಟರ್​ ಅಕ್ಷಯ್​ ಕಾಮತ್​ (204 ರನ್​, 139 ಎಸೆತ, 35 ಬೌಂಡರಿ, 1 ಸಿಕ್ಸರ್​) ಭರ್ಜರಿ ದ್ವಿಶತಕದ ಬಲದಿಂದ ಮರ್ಚೆಂಟ್ಸ್​ ಕ್ರಿಕೆಟ್​ ಕ್ಲಬ್​ ತಂಡ ಕೆಎಸ್​ಸಿಎ ಆಯೋಜಿಸಿರುವ ವೈಎಸ್​ ರಾಮಸ್ವಾಮಿ ಸ್ಮಾರಕ ಟ್ರೋಫಿ ಕ್ರಿಕೆಟ್​ ಟೂರ್ನಿಯ ಪಂದ್ಯದಲ್ಲಿ ವೈಎಂಸಿಎ ಕ್ರಿಕೆಟ್​ ಕ್ಲಬ್​ ವಿರುದ್ಧ 50 ಓವರ್​ಗಳಲ್ಲಿ 4 ವಿಕೆಟ್​ಗೆ 566 ರನ್​ ಸೇರಿಸಿ ದಾಖಲೆ ಬರೆದಿದೆ.

ಅಕ್ಷಯ್​ ಜತೆಗೆ ಸುಬ್ಬು ಯಾದವ್​ ಪ್ರಸಾದ್​ (183 ರನ್​, 76 ಎಸೆತ, 26 ಬೌಂಡರಿ, 7 ಸಿಕ್ಸರ್​), ರಾವೇಂದ್ರ (87), ವಿನೋದ್​ (59) ನೀಡಿದ ಕೊಡುಗೆಯಿಂದ ಮರ್ಚೆಂಟ್ಸ್​ ತಂಡ ಬೃಹತ್​ ಮೊತ್ತ ಕಲೆಹಾಕಿದರೆ, ವಿಶ್ವ (43ಕ್ಕೆ 4), ಕುಲದೀಪ್​ (18ಕ್ಕೆ 2) ದಾಳಿಗೆ ಕುಸಿದ ವೈಎಂಸಿಎ ತಂಡ 36.4 ಓವರ್​ಗಳಲ್ಲಿ 120 ರನ್​ಗಳಿಗೆ ಆಲೌಟ್​ ಆಗಿ 446 ರನ್​ಗಳಿಂದ ಶರಣಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net