

ನವದೆಹಲಿ: 2025ರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಅತಿಯಾಗಿ ವರ್ತಿಸಿದ್ದ ಹಿನ್ನೆಲೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ICC) ಎರಡು ಪಂದ್ಯಗಳ ನಿಷೇಧ ಹೇರಿದೆ.
2025ರ ಸೆ.21 ಮತ್ತು 28ರಂದು ನಡೆದ ಏಷ್ಯಾಕಪ್ ಫೋರ್ ಪಂದ್ಯ ಮತ್ತು ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಕ್ರಮವಾಗಿ ಪಾಕ್ ಆಟಗಾರ ರೌಫ್ ಪ್ರಚೋದನಕಾರಿ ಸನ್ನೆಗಳಿಗಾಗಿ ಅವರ ವಿರುದ್ಧ ಪಂದ್ಯದ ಶುಲ್ಕ ಶೇ.30ರಷ್ಟು ದಂಡ ವಿಧಿಸಲಾಗಿದೆ ಮತ್ತು ಅಮಾನತು ಮಾಡಲಾಗಿದೆ. ಮೆಗಾ ಟೂರ್ನಮೆಂಟ್‌ನಲ್ಲಿ ರೌಫ್ ಎರಡು ಬಾರಿ ತನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಹ್ಯಾರಿಸ್ ಭಾರತೀಯ ಅಭಿಮಾನಿಗಳ ಕಡೆಗೆ ಮುಖ ಮಾಡಿ 6-0 ತೋರಿಸಿವ ಮೂಲಕ ಗಾಳಿಯಲ್ಲಿ ಹಾದು ಹೋಗುವ ವಿಮಾನ ರೀತಿಯ ಅನುಕರಣೆ ಮಾಡಿದ್ದರು(ಆಪರೇಷನ್ ಸಿಂಧೂರ). ಅಲ್ಲದೆ, ಸಹ-ಆಟಗಾರ ಫಾರ್ಹನ್ ಸೂಪರ್-4 ಪಂದ್ಯದಲ್ಲಿ AK-47 ಗನ್ ರೀತಿಯಲ್ಲಿ ಬ್ಯಾಟ್ ತೋರಿಸಿ ಸಂಭ್ರಮಿಸಿದ್ದರು.
ಈ ಸನ್ನೆಗಳ ಕುರಿತು ಬಿಸಿಸಿಐ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ನೀಡಿತು ಮತ್ತು ಪಂದ್ಯದ ರೆಫರಿ ರಿಚಿ ರಿಚರ್ಡ್ಸನ್ ಅಧ್ಯಕ್ಷತೆಯಲ್ಲಿ ಅಧಿಕೃತ ವಿಚಾರಣೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಉಲ್ಲೇಖಿಸಿದೆ.
ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಗೆಲುವಿನ ನಂತರ, ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಈ ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು. ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಿದರು. ಈ ಹೇಳಿಕೆಯ ನಂತರ ಪಾಕಿಸ್ತಾನವು ಭಾರತ ನಾಯಕನ ವಿರುದ್ಧ ಅಧಿಕೃತ ದೂರು ದಾಖಲಿಸಿದೆ.
"ಸೂರ್ಯಕುಮಾರ್ ಯಾದವ್ (ಭಾರತ) ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಇದು ಆಟಕ್ಕೆ ಅಪಖ್ಯಾತಿ ತರುವ ನಡವಳಿಕೆಗೆ ಸಂಬಂಧಿಸಿದೆ. ಅವರಿಗೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಲಾಗಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.