

ನವದೆಹಲಿ: ನ.24ರ ಮತ್ತು ನ.25 ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜು ನಡೆದಿದ್ದು ಬಹುತೇಕರಿಗೆ ಗೊತ್ತೇ ಇದೆ. ಮೊದಲ ದಿನದಿಂದ ಎರಡನೇ ದಿನದ ಅಂತ್ಯದವರೆಗೂ ಭರ್ಜರಿ ಬಿಡ್ಡಿಂಗ್ನಲ್ಲಿ ತೊಡಗಿದ ಆಯಾ ಪ್ರಾಂಚೈಸಿಗಳು, ತಮ್ಮ ಪಟ್ಟಿಯಲ್ಲಿದ್ದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಅತ್ಯುತ್ತಮ ಖರೀದಿಗಳ ಪೈಕಿ ಬರೋಬ್ಬರಿ 27 ಕೋಟಿ ರೂ.ಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದ ರಿಷಭ್ ಪಂತ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರ ಎಂಬ ಪಟ್ಟಿಗೆ ಸೇರಿದರೆ, 26.75 ಕೋಟಿ ರೂ.ಗೆ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಖರೀದಿಯಾಗಿದ್ದಾರೆ.
ಐಪಿಎಲ್ 2025ರ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಮೂವರು ಆಟಗಾರರ ಪೈಕಿ ಮೂವರು ಸಹ ಭಾರತೀಯರೇ ಎಂಬುದು ವಿಶೇಷ. ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಈ ಬಾರಿಯ ಹರಾಜಿನಲ್ಲಿ ಎಲ್ಲರ ಗಮನಸೆಳೆದರು. ಲಖನೌ ಸೂಪರ್ ಜೈಂಟ್ಸ್ ನಾಯಕನಾಗಿ ಪಂತ್ ತಂಡವನ್ನು ಮುನ್ನಡೆಸಿದರೆ, ಪಂಜಾಬ್ ಕಿಂಗ್ಸ್ಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಲಿದ್ದಾರೆ. ಇನ್ನು ಕೆಕೆಆರ್ ಪರವೇ ಆಡಲಿರುವ ವೆಂಕಟೇಶ್, ತಂಡದ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಟೀಮ್ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
* ರಿಷಭ್ ಪಂತ್: ಲಖನೌ ಸೂಪರ್ ಜೈಂಟ್ಸ್ ( 27 ಕೋಟಿ ರೂ. )
* ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ ( 26.75 ಕೋಟಿ ರೂ. )
* ವೆಂಕಟೇಶ್ ಅಯ್ಯರ್: ಕೋಲ್ಕತ್ತ ನೈಟ್ ರೈಡರ್ಸ್ ( 23.75 ಕೋಟಿ ರೂ. )
ರಿಷಭ್ ಪಂತ್: 8.1 ಕೋಟಿ ರೂ. ತೆರಿಗೆ, 18.9 ಕೋಟಿ ರೂ. ಕೈಗೆ
ಶ್ರೇಯಸ್ ಅಯ್ಯರ್: 16.05 ಕೋಟಿ ರೂ.
ವೆಂಕಟೇಶ್ ಅಯ್ಯರ್: 14.25 ಕೋಟಿ ರೂ.