ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಬೆನ್ನಲ್ಲೇ ಮತ್ತೆ ವಿಶ್ವ ನಂ. 1 ಕೀಪರ್​-ಬ್ಯಾಟರ್​ ಎನಿಸಿದ ರಿಷಭ್​ ಪಂತ್​!

web pant
Published on

ಬೆಂಗಳೂರು: ಕಾನ್ಪುರ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಸುಮಾರು ಎರಡು ವರ್ಷಗಳ ಬಳಿಕ ಪುನರಾಗಮನ ಕಂಡ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಐಸಿಸಿ ಟೆಸ್ಟ್​ ಬ್ಯಾಟಿಂಗ್ ರ್‍ಯಾಂಕಿಂಗ್​ನಲ್ಲಿ ಅಗ್ರ 10ರೊಳಗೆ ಮರಳಿ ಸ್ಥಾನ ಸಂಪಾದಿಸಿದ್ದಾರೆ. ಪಂತ್​ 6ನೇ ಸ್ಥಾನದಲ್ಲಿ ನೆಲೆಸಿದ್ದಾರೆ. ಇದರೊಂದಿಗೆ ಅವರು ಮತ್ತೆ ವಿಶ್ವದ ನಂ. 1 ವಿಕೆಟ್​ ಕೀಪರ್​-ಬ್ಯಾಟರ್​ ಕೂಡ ಆದಂತಾಗಿದೆ.

ಪಂತ್​ ಕಳೆದ 2 ವರ್ಷಗಳಿಂದ ಟೆಸ್ಟ್​ ಆಡದ ಕಾರಣದಿಂದಾಗಿ ರ್‍ಯಾಂಕಿಂಗ್ ಲೆಕ್ಕಾಚಾರದಿಂದ ಹೊರಗಿದ್ದರು. ಆದರೆ ಈಗ ಮತ್ತೆ ಟೆಸ್ಟ್​ ಆಡಿರುವುದರಿಂದ 731 ಅಂಕಗಳೊಂದಿಗೆ 6ನೇ ಸ್ಥಾನದೊಂದಿಗೆ ರ್‍ಯಾಂಕಿಂಗ್​ಗೂ ಮರಳಿದ್ದಾರೆ. ಅವರ ಗೈರಿನಲ್ಲಿ, 8ನೇ ಸ್ಥಾನದಲ್ಲಿದ್ದ ಪಾಕಿಸ್ತಾನದ ಮೊಹಮದ್​ ರಿಜ್ವಾನ್​ ವಿಶ್ವದ ಅಗ್ರ ಶ್ರೇಯಾಂಕಿತ ವಿಕೆಟ್​ ಕೀಪರ್​-ಬ್ಯಾಟರ್​ ಎನಿಸಿದ್ದರು.

ಟೆಸ್ಟ್​ ಬೌಲಿಂಗ್ ರ್‍ಯಾಂಕಿಂಗ್​ನಲ್ಲಿ ಆರ್​. ಅಶ್ವಿನ್​ ಮತ್ತು ಜಸ್​ಪ್ರೀತ್​ ಬುಮ್ರಾ ಕ್ರಮವಾಗಿ ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದರೆ, ಆಲ್ರೌಂಡರ್​ ರ್‍ಯಾಂಕಿಂಗ್​ನಲ್ಲಿ ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ಕ್ರಮವಾಗಿ ಮೊದಲ 2 ಸ್ಥಾನದಲ್ಲಿ ಮುಂದುವರಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net