

ಪಲ್ಲೆಕಿಲೆ: ಏಷ್ಯಾಕಪ್ ಏಕದಿನ ಟೂರ್ನಿಯ ಅತ್ಯಂತ ಕುತೂಹಲಕಾರಿ ಹಣಾಹಣಿಯಲ್ಲಿ ಪಾಕಿಸ್ತಾನದ ವೇಗಿಗಳು ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೂ, ಉಪನಾಯಕ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (87 ರನ್, 90 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ವಿಕೆಟ್ ಕೀಪರ್-ಎಡಗೈ ಬ್ಯಾಟರ್ ಇಶಾನ್ ಕಿಶನ್ (82 ರನ್, 81 ಎಸೆತ, 9 ಬೌಂಡರಿ, 2 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಮಳೆಬಾಧಿತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಆದರೆ ಮಳೆ ಅಡಚಣೆಯಿಂದಾಗಿ ಭಾರತೀಯ ಬೌಲರ್‌ಗಳು ದಾಳಿಗಿಳಿಯುವುದು ವಿಳಂಬಗೊಂಡಿದೆ.
ಪಲ್ಲೆಕಿಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಳೆ ಭೀತಿಯ ನಡುವೆಯೂ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಒಂದು ಹಂತದಲ್ಲಿ 66 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಜತೆಯಾಟ ಆಡಿದ ಲವಾಗಿ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸಮಾಧಾನ ಕಂಡಿದೆ. ಹೊಸ ಚೆಂಡಿನಲ್ಲಿ ಮತ್ತು ಸ್ಲಾಗ್ ಓವರ್‌ಗಳಲ್ಲಿ ಪಾಕ್ ಎಡಗೈ ವೇಗಿ ಶಾಹೀನ್ ಷಾ ಅಫ್ರಿದಿ (35ಕ್ಕೆ 4) ಬಿಗಿ ಬೌಲಿಂಗ್ ದಾಳಿಯೊಂದಿಗೆ ಟೀಮ್ ಇಂಡಿಯಾವನ್ನು ಕಾಡಿದರು. ಪ್ರತಿಯಾಗಿ ಪಾಕಿಸ್ತಾನದ ಚೇಸಿಂಗ್‌ಗೆ ಮಳೆ ಅಡ್ಡಿಪಡಿಸಿದ್ದು, ಓವರ್ ಕಡಿತಗೊಳ್ಳಲಾರಂಭಿಸಿದೆ. ಡಕ್ವರ್ತ್-ಲೂಯಿಸ್ ನಿಯಮದನ್ವಯ ಸ್ಪಷ್ಟ ಲಿತಾಂಶ ಕಾಣಲು ಪಾಕಿಸ್ತಾನ ತಂಡ ಕನಿಷ್ಠ 20 ಓವರ್ ಆಡುವುದು ಅಗತ್ಯವಾಗಿದೆ. ಡಿಎಲ್‌ಎಸ್ ನಿಯಮದನ್ವಯ ಪಾಕ್ 20 ಓವರ್‌ಗಳಲ್ಲಿ 155 ಮತ್ತು 30 ಓವರ್‌ಗಳಲ್ಲಿ 203 ರನ್ ಗಳಿಸಬೇಕಾಗಿದೆ.
ಭಾರತಕ್ಕೆ ಕೈಕೊಟ್ಟ ಟಾಪ್-4
ನಾಯಕ ರೋಹಿತ್ ಶರ್ಮ (11), ಶುಭಮಾನ್ ಗಿಲ್ (10) ಎಚ್ಚರಿಕೆಯ ಆರಂಭ ಒದಗಿಸಲು ಯತ್ನಿಸಿದಾಗ ನಿರೀಕ್ಷೆಯಂತೆಯೇ, ವೇಗಿ ಶಾಹೀನ್ ಷಾ ಅಫ್ರಿದಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕಕ್ಕೆ ಕಂಟಕ ಎನಿಸಿದರು. ಪಂದ್ಯದ 2ನೇ ಎಸೆತದಲ್ಲಿ ಬೌಂಡರಿ ಮೂಲಕ ಖಾತೆ ತೆರೆದ ರೋಹಿತ್ 4ನೇ ಓವರ್‌ನಲ್ಲಿ ಅಫ್ರಿದಿ ಎಸೆತದಲ್ಲಿ ಬೌಲ್ಡ್ ಆದರು. ಪಾಕ್ ಬೌಲರ್‌ಗಳ ಶಿಸ್ತಿನ ಬೌಲಿಂಗ್ ದಾಳಿಯ ಎದುರು ರನ್‌ಗಳಿಸಲು ಪರದಾಡಿದ ಶುಭಮಾನ್ ಗಿಲ್ ಮೊದಲ ರನ್‌ಗಳಿಸಲು 10 ಎಸೆತ ಆಡಿದರು. ರೋಹಿತ್ ನಿರ್ಗಮನದ ಬೆನ್ನಲ್ಲೇ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (4) ಕೂಡ ಅಫ್ರಿದಿ ಎಸೆದ ಇನಿಂಗ್ಸ್ 7ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಶಸಚಿಕಿತ್ಸೆಯಿಂದ ಚೇತರಿಸಿಕೊಂಡು ಕಣಕ್ಕಿಳಿದ ಶ್ರೇಯಸ್ ಅಯ್ಯರ್ (14) 2 ಬೌಂಡರಿ ಸಿಡಿಸಿ ಉತ್ತಮ ಲಯದಲ್ಲಿ ಕಾಣಿಸಿಕೊಂಡರೂ, 10ನೇ ಓವರ್‌ನಲ್ಲಿ ಹ್ಯಾರಿಸ್ ರ್ೌ ಎಸೆತವನ್ನು ಮೀಡ್ ವಿಕೆಟ್‌ನತ್ತ ಬಾರಿಸಲು ಯತ್ನಿಸಿ ವಿಕೆಟ್ ಕೈ ಚೆಲ್ಲಿದರು. 15ನೇ ಓವರ್‌ನಲ್ಲಿ ಗಿಲ್ ಅವರ 32 ಎಸೆತಗಳ ಆಮೆಗತಿಯ ಇನಿಂಗ್ಸ್‌ಗೂ ರ್ೌ ತೆರೆ ಎಳೆದರು.
ಕಿಶನ್- ಹಾರ್ದಿಕ್ ತಿರುಗೇಟು
ಕೇವಲ 66 ರನ್‌ಗಳಿಗೆ 4 ವಿಕೆಟ್ ಕೈಚೆಲ್ಲಿ ಆಘಾತ ಎದುರಿಸಿದ ಟೀಮ್ ಇಂಡಿಯಾ, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ದಿಟ್ಟ ಬ್ಯಾಟಿಂಗ್‌ನಿಂದ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಇವರಿಬ್ಬರು ಪಾಕ್ ಬೌಲರ್‌ಗಳ ಎದುರು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ವಿಂಡೀಸ್ ಪ್ರವಾಸದ ಏಕದಿನ ಸರಣಿಯ ಾರ್ಮ್ ಮುಂದುವರಿಸಿದ ಕಿಶನ್, ವಿಕೆಟ್ ಕಾಯ್ದುಕೊಳ್ಳುವ ಒತ್ತಡದ ನಡುವೆಯೂ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸಿದರು. ಇವರಿಗೆ ಪಾಂಡ್ಯ ಉತ್ತಮ ಬೆಂಬಲ ಒದಗಿಸಿದರು. ಕನ್ನಡಿಗ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಕಿಶನ್, ಪಾಕ್ ಬೌಲರ್‌ಗಳನ್ನು ದಂಡಿಸಿದರು. ಪಾಂಡ್ಯ ತಾಳ್ಮೆಯ ಬ್ಯಾಟಿಂಗ್‌ನೊಂದಿಗೆ ತಂಡದ ಮೊತ್ತ ಏರಿಸಿದರು. ಇವರಿಬ್ಬರು 5ನೇ ವಿಕೆಟ್‌ಗೆ 141 ಎಸೆತಗಳಲ್ಲಿ 138 ರನ್ ಪೇರಿಸಿದರು. ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ಸತತ 4, ಒಟ್ಟಾರೆ 7ನೇ ಅರ್ಧಶತಕ ಪೂರೈಸಿದರು. 62 ಎಸೆತಗಳಲ್ಲಿ ಹಾರ್ದಿಕ್ ಅರ್ಧಶತಕ ಪೂರೈಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ಜೋಡಿಗೆ ವೇಗಿ ಹ್ಯಾರಿಸ್ ರ್ೌ ಬ್ರೇಕ್ ಹಾಕಿದರು.
ಸ್ಲಾಗ್ ಓವರ್‌ಗಳಲ್ಲಿ ಮತ್ತೆ ಕುಸಿತ
ಕಿಶನ್ ಪೆವಿಲಿಯನ್ ಸೇರಿದ ಬಳಿಕ ಹಾರ್ದಿಕ್ ಜತೆ ರವೀಂದ್ರ ಜಡೇಜಾ (14) 6ನೇ ವಿಕೆಟ್‌ಗೆ 35 ರನ್ ಪೇರಿಸಿದರು. ಆಗ ಮತ್ತೆ ದಾಳಿಗಿಳಿದ ಶಾಹೀನ್ ಷಾ ಅಫ್ರಿದಿ, ಹಾರ್ದಿಕ್ ವಿಕೆಟ್ ಪಡೆದು ಕಡಿವಾಣ ಹೇರಿದರು. ಇದರ ಬೆನ್ನಲ್ಲೇ ಜಡೇಜಾ, ಶಾರ್ದೂಲ್ ಠಾಕೂರ್ (3) ನಿರಾಸೆ ಮೂಡಿಸಿದರು. ಕೊನೆಯಲ್ಲಿ ಜಸ್‌ಪ್ರೀತ್ ಬುಮ್ರಾ (16) ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. 45 ರನ್ ಅಂತರದಲ್ಲಿ ಟೀಮ್ ಇಂಡಿಯಾ ಕೊನೇ 5 ವಿಕೆಟ್ ಕಳೆದುಕೊಂಡಿತು.