ಖ್ಯಾತ ಕ್ರಿಕೆಟಿಗನ 2 ವರ್ಷದ ಪುಟ್ಟ ಮಗಳು ನಿಧನ..Hazratullah Zazai Has Lost His Daughter

Hazratullah Zazai Has Lost His Daughter
Published on

ಅಫ್ಘಾನಿಸ್ತಾನ: ( Hazratullah Zazai Has Lost His Daughter ) ಅಫ್ಘಾನಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಹಝರತುಲ್ಲಾ ಝಝಾಹಿ ಅವರ 2 ವರ್ಷದ ಪುಟ್ಟ ಕಂದಮ್ಮ ನಿಧನವಾಗಿದ್ದಾಳೆ.  ಪುಟ್ಟ ಮಗುವಿನ ನಿಧನಕ್ಕೆ ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಈ ಸುದ್ದಿಯನ್ನು ಅಫ್ಘಾನ್ ತಂಡ ಆಲ್​ರೌಂಡರ್ ಕರೀಮ್ ಜನ್ನತ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದು, ಝಝಾಹಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಆಲ್​ರೌಂಡರ್ ಕರೀಮ್ ಜನ್ನತ್ “ನನ್ನ ಆತ್ಮೀಯ ಸ್ನೇಹಿತ ಸಹೋದರ ಹಝರತುಲ್ಲಾ ಝಝಾಹಿ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ ಎಂಬ ದುಃಖಕರ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ಅವರ ಮತ್ತು ಅವರ ಕುಟುಂಬಕ್ಕಾಗಿ ನನ್ನ ಸಂತಾಪಗಳು. ಅವರಿಗಾಗಿ ಅವರ ಕುಟುಂಬಕ್ಕಾಗಿ ಎಲ್ಲರೂ ಪ್ರಾರ್ಥಿಸಿ ಎಂದು  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

26 ವರ್ಷದ ಹಝರತುಲ್ಲಾ ಝಝಾಹಿ ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. 2016 ರಲ್ಲಿ ಅಫ್ಘಾನಿಸ್ತಾನ್ ಪರ ಪಾದಾರ್ಪಣೆ ಮಾಡಿದ್ದ ಝಝಾಹಿ ಈವರೆಗೆ 16 ಏಕದಿನ ಹಾಗೂ 45 ಟಿ20 ಪಂದ್ಯಗಳನ್ನಾಡಿದ್ದಾರೆ. ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net