ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಆಘಾತ: ಅಫ್ಘಾನಿಸ್ತಾನಕ್ಕೆ ಭರ್ಜರಿ ಜಯ

New-Project-1-5
Published on

ನವದೆಹಲಿ: ಸ್ಪಿನ್ನರ್‌ಗಳ ದಾಳಿಗೆ ಚಡಪಡಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಚ್ಚರಿಯ ಸೋಲು ಕಂಡಿದೆ. ಯುವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ (28 ರನ್, 51ಕ್ಕೆ3 ವಿಕೆಟ್) ಆಲ್ರೌಂಡ್ ಆಟದ ಜತೆಯಾಗಿ ಸರ್ವಾಂಗೀಣ ನಿರ್ವಹಣೆ ತೋರಿದ ಆಪ್ಘಾನಿಸ್ತಾನ ತಂಡ ಎದುರಾಳಿ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಮಣಿಸಿದೆ. ಇದರೊಂದಿಗೆ ವಿಶ್ವಕಪ್‌ನಲ್ಲಿ ಸತತ 14 ಪಂದ್ಯಗಳ ಸೋಲಿನ ಓಟಕ್ಕೆ ಬ್ರೇಕ್ ಹಾಕಿದೆ. ಜೋಸ್ ಬಟ್ಲರ್ ಬಳಗ ಟೂರ್ನಿಯಲ್ಲಿ 2ನೇ ಬಾರಿ ಪರಾಭವಗೊಂಡಿದೆ.

2011ರ ವಿಶ್ವಕಪ್‌ನಲ್ಲಿ ಆಂಗ್ಲರ ಪರ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಎನಿಸಿದ್ದ ಜೋನಾಥನ್ ಟ್ರಾಟ್ ಪ್ರಸ್ತುತ ಆ್ಘನ್ ತಂಡದ ಕೋಚ್ ಆಗಿದ್ದಾರೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆ್ಘಾನಿಸ್ತಾನ, ರಹಮಾನುಲ್ಲಾ ಗುರ್ಬಜ್ (80 ರನ್, 57 ಎಸೆತ, 8 ಬೌಂಡರಿ, 4 ಸಿಕ್ಸರ್) ಬಿರುಸಿನ ಆಟದ ಬಲದಿಂದ 49.5 ಓವರ್‌ಗಳಲ್ಲಿ 284 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಪ್ರತಿಯಾಗಿ ತ್ರಿವಳಿ ಸ್ಪಿನ್ನರ್‌ಗಳ ಎದುರು ಬ್ಯಾಟಿಂಗ್ ವೈಲ್ಯ ಅನುಭವಿಸಿದ ಇಂಗ್ಲೆಂಡ್, ಯುವ ಬ್ಯಾಟರ್ ಹ್ಯಾರಿ ಬ್ರೂಕ್ (66 ರನ್, 61 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಪ್ರತಿರೋಧ ನಡುವೆಯೂ, 40.3 ಓವರ್‌ಗಳಲ್ಲಿ 215 ರನ್‌ಗಳಿಗೆ ಸರ್ವಪತನ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net