ಆಫ್ಘನ್ ಸ್ಪಿನ್ ಬಲೆಗೆ ಬಿದ್ದ ಸ್ಕಾಟ್ಲೆಂಡ್ ; ನಬಿ ತಂಡಕ್ಕೆ 130 ರನ್ ಜಯ

afghanistan and scotland for web
Published on

ಶಾರ್ಜಾ: ಸ್ಪಿನ್ನರ್‌ಗಳಾದ ಮುಜೀಬ್ ಉರ್ ರೆಹಮಾನ್ (20ಕ್ಕೆ 5) ಹಾಗೂ ರಶೀದ್ ಖಾನ್ (9ಕ್ಕೆ 4) ಮಾರಕ ದಾಳಿ ನೆರವಿನಿಂದ ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು 130 ರನ್‌ಗಳ ಭಾರಿ ಅಂತರದಿಂದ ಮಣಿಸಿ ಶುಭಾರಂಭ ಕಂಡಿತು. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘನ್ ತಂಡ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಜೀಬುಲ್ಲಾ ಜದ್ರಾನ್ (59ರನ್, 34 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ರೆಹಮನುಲ್ಲಾ ಗುರ್ಬಾಜ್ (46 ರನ್, 37 ಎಸೆತ, 1 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 190 ರನ್ ಕಲೆಹಾಕಿತು. ಮೊದಲ ಸುತ್ತಿನಿಂದ ಸೂಪರ್-12 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿರುವ ಸ್ಕಾಟ್ಲೆಂಡ್ ತಂಡದ ಬೌಲರ್‌ಗಳಿಗೆ ಅಫ್ಘಾನಿಸ್ತಾನ ಬ್ಯಾಟರ್‌ಗಳು ನೀರಿಳಿಸಿದರು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡಕ್ಕೆ ಸ್ಪಿನ್ ಬಲೆ ಹೆಣೆದ ಅಫ್ಘಾನಿಸ್ತಾನ ಬೌಲರ್‌ಗಳು, 10.2 ಓವರ್‌ಗಳಲ್ಲಿ ಕೇವಲ 60 ರನ್‌ಗಳಿಗೆ ಕಟ್ಟಿಹಾಕಿದರು.

ಅಫ್ಘಾನಿಸ್ತಾನ: 4 ವಿಕೆಟ್‌ಗೆ 190 (ಹಜ್ರಾತುಲ್ಲಾ ಜಜೈ 44, ಮೊಹಮದ್ ಶಹಜಾದ್ 22, ರಹಮನುಲ್ಲಾ ಗುರ್ಬಾಜ್ 46, ನಜೀಬುಲ್ಲಾ ಜದ್ರಾನ್ 59, ಸ್ಯಾನ್ ಷರೀಫ್ 33ಕ್ಕೆ 2, ಜೋಸ್ ಡೇವಿ 41ಕ್ಕೆ 1, ಮಾರ್ಕ್ ವ್ಯಾಟ್ 23ಕ್ಕೆ 1). ಸ್ಕಾಟ್ಲೆಂಡ್ ತಂಡ: 10.2 ಓವರ್‌ಗಳಲ್ಲಿ 60 (ಕ್ರೀಸ್ ಗ್ರೇವ್ಸ್ 12, ಜಾರ್ಜ್ ಮುನ್ಸೆ 25, ಮುಜೀಬ್ ಉರ್ ರೆಹಮಾನ್ 20ಕ್ಕೆ 5, ರಶೀದ್ ಖಾನ್ 9ಕ್ಕೆ 4, ನವೀನ್ ಉಲ್ ಹಕ್ 12ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net