

ಅಬುಧಾಬಿ: ಬಲಿಷ್ಠ ನಿರ್ವಹಣೆ ತೋರಿದ ಅಫ್ಘಾನಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರ ಹಂತದ ಪಂದ್ಯದಲ್ಲಿ 62 ರನ್‌ಗಳಿಂದ ನಮೀಬಿಯ ತಂಡವನ್ನು ಮಣಿಸಿ ಗೆಲುವಿನ ಹಳಿಗೇರಿತು. ಹಿಂದಿನ ಪಂದ್ಯದಲ್ಲಿ ಪಾಕ್ ಎದುರು ಸೋಲು ಕಂಡಿದ್ದ ಅಫ್ಘಾನಿಸ್ತಾನ ತಂಡ, ಟೂರ್ನಿಯಲ್ಲಿ 2ನೇ ಜಯ ದಾಖಲಿಸುವ ಮೂಲಕ ಸೆಮೀಸ್ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ, ಮೊಹಮದ್ ಶಾಹಜಾದ್ (45ರನ್, 33 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಮೊಹಮದ್ ನಬಿ (32*ರನ್, 17 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 160 ರನ್ ಪೇರಿಸಿತು. ಬಳಿಕ ಹಮೀದ್ ಹಸನ್ (9ಕ್ಕೆ 3) ಹಾಗೂ ನವೀನ್ ಉಲ್ ಹಕ್ (17ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿದ ನಮೀಬಿಯ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 98 ರನ್ ಕಲೆಹಾಕಿತು.
ಅಫ್ಘಾನಿಸ್ತಾನ: 5 ವಿಕೆಟ್‌ಗೆ 160 (ಮೊಹಮದ್ ಶಾಹಜಾದ್ 45, ಅಸ್ಗರ್ ಆ್ಘನ್ 31, ಮೊಹಮದ್ ನಬಿ 32*, ರುಬೆನ್ ಟಿ 34ಕ್ಕೆ 2, ಜಾನ್ ನಿಕೋಲ್ 21ಕ್ಕೆ 2), ನಮೀಬಿಯ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 98 (ಡೇವಿಡ್ ವೈಸ್ 26, ನವೀನ್ ಉಲ್ ಹಕ್ 26ಕ್ಕೆ 3, ಹಮಿದ್ ಹಸನ್ 9ಕ್ಕೆ 3).