

ಕರಾಚಿ/ಕೋಲ್ಕತ: ಈ ವರ್ಷದ ಏಷ್ಯಾಕಪ್ ಟೂರ್ನಿಯ ಸ್ಥಳ ನಿಗದಿಯ ಬಗ್ಗೆ ದುಬೈನಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ (ಎಸಿಸಿ) ಸಭೆ ಮುಂದೂಡಿಕೆಯಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕರೊನಾ ಭೀತಿಯಿಂದಾಗಿ ದುಬೈಗೆ ತೆರಳಲು ಹಿಂದೇಟು ಹಾಕಿದ್ದು ಇದಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಲ್ಲಿ ಯುಎಇಯಲ್ಲಿ 700ಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಭಾನುವಾರ ರಾತ್ರಿ ದುಬೈಗೆ ಪ್ರಯಾಣಿಸಬೇಕಾಗಿದ್ದ ಗಂಗೂಲಿ, ಪ್ರಯಾಣವನ್ನು ರದ್ದುಗೊಳಿಸಿದ್ದರು.
ಹೀಗಾಗಿ ಸಭೆಯನ್ನು ಮಾಸಾಂತ್ಯಕ್ಕೆ ಮುಂದೂಡಲಾಗಿದೆ. ಏಷ್ಯಾಕಪ್ ದುಬೈನಲ್ಲಿ ನಡೆಯಲಿದೆ ಎಂದು ಗಂಗೂಲಿ ಈ ಮುನ್ನ ಹೇಳಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಸ್ಥಳದ ಬಗ್ಗೆ ಇನ್ನೂ ಅಂತಿಮ ತೀರ್ವನವಾಗಿಲ್ಲ ಎಂದಿದ್ದರು. ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದಲ್ಲಿ ಟೂರ್ನಿ ನಿಗದಿಯಾಗಿದ್ದರೂ, ಭದ್ರತಾ ಭೀತಿಯಿಂದಾಗಿ ಭಾರತ ಪ್ರಯಾಣಿಸಲು ನಿರಾಕರಿಸಿದೆ. -ಪಿಟಿಐ