ಭಾರತ ಎ ತಂಡಕ್ಕೆ ತಿಲಕ್​ ನಾಯಕ; ಆರ್​ಸಿಬಿ ನಾಯಕನಿಗೆ ಉಪನಾಯಕ ಪಟ್ಟ!

ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಟೂರ್ನಿಗೆ ಕನ್ನಡಿಗರಿಲ್ಲ!
cricket
ರಜತ್​ ಪಾಟೀದಾರ್, ತಿಲಕ್ ವರ್ಮಸಂಗ್ರಹ ಚಿತ್ರ
Published on: 

ನವದೆಹಲಿ: ನವೆಂಬರ್​ 19ರಿಂದ 29ರವರೆಗೆ ಕತಾರ್​ನ ದೋಹಾದಲ್ಲಿ ನಡೆಯಲಿರುವ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಟೂರ್ನಿಗೆ ಭಾರತ ಎ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ತಿಲಕ್​ ವರ್ಮ ನಾಯಕ ಮತ್ತು ಆರ್​ಸಿಬಿಗೆ ಸತತ 2 ಐಪಿಎಲ್​ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರಜತ್​ ಪಾಟೀದಾರ್​ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಅಭಿಷೇಕ್​ ಶರ್ಮ, ವೈಭವ್​ ಸೂರ್ಯವಂಶಿ ಸಹಿತ ಭಾರತದ ಟಿ20 ತಾರೆಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಯಾವುದೇ ಆಟಗಾರ ತಂಡದಲ್ಲಿಲ್ಲ. ಭಾರತ ತಂಡ ನ.20ರಂದು ನೇಪಾಳ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ನ.22ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ವಿರುದ್ಧ ಸೆಣಸಲಿದೆ. ನ.24ಕ್ಕೆ ಯುಎಇ ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಿಸ್ತಾನ ಎ ಮತ್ತು ಹಾಂಕಾಂಗ್​ ಟೂರ್ನಿಯಲ್ಲಿ ಆಡಲಿರುವ ಇತರ 4 ತಂಡಗಳಾಗಿದ್ದು, ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಭಾರತ ಎ ತಂಡ: ಅಭಿಷೇಕ್​ ಶರ್ಮ, ವೈಭವ್​ ಸೂರ್ಯವಂಶಿ, ಪ್ರಭ್​ಸಿಮ್ರನ್​ ಸಿಂಗ್​ (ವಿ.ಕೀ), ತಿಲಕ್​ ವರ್ಮ (ನಾಯಕ), ರಜತ್​ ಪಾಟೀದಾರ್​ (ಉಪನಾಯಕ), ರಿಂಕು ಸಿಂಗ್​, ಕುಮಾರ್​ ಕುಶಾಗ್ರ (ವಿ.ಕೀ), ಸೂರ್ಯಾಂಶ್​ ಶೆಡ್ಗೆ, ಶಾಬಾಜ್​ ಅಹ್ಮದ್​, ವಿಪ್ರಜ್​ ನಿಗಮ್​, ಹರ್ಷ್​ ದುಬೆ, ತನುಷ್​ ಕೋಟ್ಯಾನ್​, ಹರ್ಷಿತ್​ ರಾಣಾ, ಪ್ರಿನ್ಸ್​ ಯಾದವ್​, ಅರ್ಷದ್​ ಖಾನ್​.