ಐಸಿಸಿ ಮಾಸಿಕ ಪ್ರಶಸ್ತಿ ರೇಸ್​ನಲ್ಲಿ ಭಾರತದ ನಾಲ್ವರು

ಪುರುಷರ ವಿಭಾಗದಲ್ಲಿ ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್​ ಮತ್ತು ಆರಂಭಿಕ ಅಭಿಷೇಕ್​ ಶರ್ಮ ಹಾಗೂ ಮಹಿಳಾ ವಿಭಾಗದಲ್ಲಿ ಶೆಫಾಲಿ ವರ್ಮ ಮತ್ತು ಶ್ರೀ ಚರಣಿ ನಾಮ ನಿರ್ದೇಶನ
icc ranking
ಶುಭಮಾನ್​ ಗಿಲ್​, ಅಭಿಷೇಕ್ ಶರ್ಮಸಂಗ್ರಹ ಚಿತ್ರ
Published on: 

ದುಬೈ: ಸೆಪ್ಟೆಂಬರ್​ ತಿಂಗಳ ಐಸಿಸಿ ಕ್ರಿಕೆಟರ್​ ಪ್ರಶಸ್ತಿಗೆ ಭಾರತದ ನಾಲ್ವರು ತಾರೆಯರು ರೇಸ್​ನಲ್ಲಿದ್ದಾರೆ. ಪುರುಷರ ವಿಭಾಗದಲ್ಲಿ ಟೀಮ್​ ಇಂಡಿಯಾ ನಾಯಕ ಶುಭಮಾನ್​ ಗಿಲ್​ ಮತ್ತು ಆರಂಭಿಕ ಅಭಿಷೇಕ್​ ಶರ್ಮ ಹಾಗೂ ಮಹಿಳಾ ವಿಭಾಗದಲ್ಲಿ ಶೆಫಾಲಿ ವರ್ಮ ಮತ್ತು ಶ್ರೀ ಚರಣಿ ನಾಮ ನಿರ್ದೇಶನಗೊಂಡಿದ್ದಾರೆ.

ಪುರುಷರ ವಿಭಾಗದಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್​ ರಾಜಾ ಮತ್ತು ಮಹಿಳಾ ವಿಭಾಗದಲ್ಲಿ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಕೂಡ ನಾಮನಿರ್ದೇಶನಗೊಂಡಿದ್ದಾರೆ. ಅಭಿಷೇಕ್​ ಸೆಪ್ಟೆಂಬರ್​ನಲ್ಲಿ ಆಡಿರುವ 4 ಟಿ20 ಪಂದ್ಯಗಳಲ್ಲಿ 229 ರನ್​ ಬಾರಿಸಿದ್ದಾರೆ. ಈ ಪೈಕಿ ಅಫ್ಘಾನಿಸ್ತಾನ ವಿರುದ್ಧ 30 ಎಸೆತಗಳಲ್ಲೇ ಸಿಡಿಸಿರುವ ಶತಕಗಳೂ ಸೇರಿವೆ. ಗಿಲ್​ ಸೆಪ್ಟೆಂಬರ್​ನಲ್ಲಿ ವಿಂಡೀಸ್​ ವಿರುದ್ಧದ 2 ಏಕದಿನ ಪಂದ್ಯಗಳಲ್ಲಿ 333 ರನ್​ ಬಾರಿಸಿದ್ದಾರೆ. ಇದರಲ್ಲಿ ವಿಂಡೀಸ್​ ವಿರುದ್ಧದ ದ್ವಿಶತಕವೂ ಸೇರಿದೆ. ಗಿಲ್​ 5ನೇ ಬಾರಿ ಐಸಿಸಿ ಮಾಸಿಕ ಪ್ರಶಸ್ತಿ ಪಡೆಯುವ ರೇಸ್​ನಲ್ಲಿದ್ದಾರೆ.

ಶೆಫಾಲಿ ವರ್ಷ ಸೆಪ್ಟೆಂಬರ್​ನಲ್ಲಿ ಆಡಿರುವ ಏಷ್ಯಾಕಪ್​ ಮತ್ತು ಏಷ್ಯನ್​ ಗೇಮ್ಸ್​ನ 7 ಪಂದ್ಯಗಳಲ್ಲಿ 360 ರನ್​ ಮತ್ತು 6 ವಿಕೆಟ್​ ಗಳಿಸಿದ್ದರೆ, ಎಡಗೈ ಸ್ಪಿನ್ನರ್​ ಶ್ರೀಚರಣಿ 7 ಪಂದ್ಯಗಳಲ್ಲಿ 18 ವಿಕೆಟ್​ ಕಬಳಿಸಿ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net