ಹೊಸ ಪಾತ್ರದೊಂದಿಗೆ ನೆಚ್ಚಿನ ಆರ್‌ಸಿಬಿಗೆ ವಾಪಸಾಗಲಿದ್ದಾರೆ ಎಬಿಡಿ

abd villers for web
Published on

ಜೊಹಾನ್ಸ್‌ಬರ್ಗ್: ಮುಂದಿನ ಆವೃತ್ತಿಯ ಐಪಿಎಲ್‌ಗೆ ಆರ್‌ಸಿಬಿ ತಂಡಕ್ಕೆ ವಾಪಸಾಗುವೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್‌ ಖಚಿತಪಡಿಸಿದ್ದಾರೆ. ಆದರೆ, ತಂಡದಲ್ಲಿ ಯಾವ ಪಾತ್ರವಹಿಸಲಿದ್ದಾರೆ ಎಂಬುದನ್ನು ಮಾತ್ರ ಎಬಿಡಿ ತಿಳಿಸಿಲ್ಲ. ಕಳೆದ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಎಬಿಡಿ, ಹಿಂದಿನ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಪ್ರಮುಖ ಭಾಗವಾಗಿದ್ದರು. ‘ಮುಂದಿನ ವರ್ಷ ಎಬಿಡಿ ತಂಡಕ್ಕೆ ವಾಪಸಾಗಲಿದ್ದು, ಹೊಸ ಜವಾಬ್ದಾರಿಯೊಂದಿಗೆ ಬರಲಿದ್ದಾರೆ’ ಎಂದು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ತಿಂಗಳು ಹೇಳಿಕೊಂಡಿದ್ದರು.

ತಂಡದಲ್ಲಿ ನನ್ನ ಪಾತ್ರ ಏನು ಎಂಬುದು ತಿಳಿದಿಲ್ಲ. ಮುಂದಿನ ಐಪಿಎಲ್‌ನಲ್ಲಿ ಖಂಡಿತವಾಗಿಯೂ ಆರ್‌ಸಿಬಿ ತಂಡದೊಂದಿಗೆ ಇರಲಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಎರಡನೇ ತವರು ಮನೆಯಿದ್ದಂತೆ. ಅಲ್ಲಿಗೆ ವಾಪಸಾಗಲು ಬಯಸುವೆ. ಮತ್ತೊಮ್ಮೆ ಭರ್ತಿ ಸ್ಟೇಡಿಯಂ ನೋಡಲು ಉತ್ಸುಕನಾಗಿರುವೆ ಎಂದು ತಿಳಿಸಿದ್ದಾರೆ. ಎಬಿಡಿ ಆರ್‌ಸಿಬಿ ಪರ ಆಡಿರುವ 184 ಪಂದ್ಯಗಳಿಂದ 2 ಶತಕ, 4 ಅರ್ಧಶತಕ ಸೇರಿದಂತೆ 5162 ರನ್ ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net