

ಲಿಂಕನ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಗಮನಸೆಳೆದ ಭಾರತ ಎ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎ ತಂಡವನ್ನು 5 ವಿಕೆಟ್ಗಳಿಂದ ಜಯ ದಾಖಲಿಸಿತು.
ಬೆರ್ಟ್ ಸುಟ್ಕ್ಲೀಫೆ ಓವೆಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 230 ರನ್ಗಳಿಗೆ ಸರ್ವಪತನ ಕಂಡರೆ, ಪ್ರತಿಯಾಗಿ ಭಾರತ ತಂಡ 29.3 ಓವರ್ಗಳಲ್ಲಿ 5 ವಿಕೆಟ್ಗೆ 231 ರನ್ಗಳಿಸಿ ಗೆಲುವಿನ ನಗೆ ಬೀರಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿತು. 2ನೇ ಏಕದಿನ ಪಂದ್ಯ ಶುಕ್ರವಾರ
ಚರ್ಚ್ಸಿ್ಟ್ರಟ್ನಲ್ಲಿ ನಡೆಯಲಿದೆ. ಆತಿಥೇಯ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯಿತು. ಆರಂಭಿಕರಾದ ಪೃಥ್ವಿ ಷಾ (48ರನ್, 35 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ (29ರನ್, 29 ಎಸೆತ, 2 ಬೌಂಡರಿ) ಜೋಡಿ ಮೊದಲ ವಿಕೆಟ್ಗೆ ಎದುರಿಸಿದ 55 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿತು. 10 ರನ್ಗಳ ಅಂತರದಲ್ಲಿ ಈ ಜೋಡಿ ನಿರ್ಗಮಿಸಿದ ಬಳಿಕ ಜತೆಯಾದ ಶುಭಮಾನ್ ಗಿಲ್ (30ರನ್, 35 ಎಸೆತ, 3 ಬೌಂಡರಿ), ನ್ಯೂಜಿಲೆಂಡ್ ಪ್ರವಾಸಕ್ಕೆ ರಾಷ್ಟ್ರೀಯ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್ (39ರನ್, 21 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಅನುಭವಿ ಸೂರ್ಯಕುಮಾರ್ ಯಾದವ್ (35 ರನ್, 19 ಎಸೆತ, 6 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ನ್ಯೂಜಿಲೆಂಡ್ ಎ ತಂಡ: 48.3 ಓವರ್ಗಳಲ್ಲಿ 230 (ರಚಿನ್ ರವೀಂದ್ರ 49, ಖಲೀಲ್ ಅಹಮದ್ 46ಕ್ಕೆ 2, ಮೊಹಮದ್ ಸಿರಾಜ್ 33ಕ್ಕೆ 3, ಅಕ್ಷರ್ ಪಟೇಲ್ 31ಕ್ಕೆ 2), ಭಾರತ ಎ ತಂಡ: 29.3 ಓವರ್ಗಳಲ್ಲಿ 5 ವಿಕೆಟ್ಗೆ 231 (ಪೃಥ್ವಿ ಷಾ 48, ಮಯಾಂಕ್ ಅಗರ್ವಾಲ್ 29, ಶುಭಮಾನ್ ಗಿಲ್ 30, ಸಂಜು ಸ್ಯಾಮ್ಸನ್ 39, ಸೂರ್ಯಕುಮಾರ್35, ವಿಜಯ್ ಶಂಕರ್ 20*, ಕೃನಾಲ್ ಪಾಂಡ್ಯ 14*, ಜೇಮ್್ಸ ನೀಶಾಮ್ 25ಕ್ಕೆ 2).